ಧೀರನ ನೋಡಿರೈ
ಕರುಣಾಪೋರನ ಪಾಡಿರೈ ||ಪ||
ವಾರಿಜವದನ ಸಮೀರಜ ಕಪಿನೃಪ
ದ್ವಿಜನ ಭಾವಿ ಅಜನ ||ಅ.ಪ||
ಕಣಕಾಲಂದಿಗೆ ಒಪ್ಪುವ ಸರ ಕಂಠಮಣಿಯ ವಜ್ರದ ಖಣಿಯ
ಮಣಿಯದ ಬಹಳ ಕಠಿಣ ದಿತಿಜರನೆಲ್ಲ ಹಣಿಯಬೇಕೆಂಬ ಧಣಿಯ
ಪ್ರಣತಿಸಿ ನಾರಾಯಣ ಪದ ಭಕ್ತಾಗ್ರಣಿಯ ಚಿಂತಾಮಣಿಯ
ತೃಣೀಕೃತಮರಪತಿವಿಶೋ ಮಾಧವ ಪಣಿಯ ಕಪಿಶಿರೋಮಣಿಯ ||೧||
ಮಂದಸ್ಮಿತಯುತ ಕುಂದಕುಟ್ಮಲ ಸಮರದನ ಪೂರ್ಣಚಂದ್ರವದನ
ಇಂದುಧರಾದಿಸುರ ವೃಂದವಂದಿತ ಪದಯುಗನ ಹಸ್ತಾಯುಧನ
ಬಂದೀಕೃತ ಸುರಸುಂದರಿ ಸಮುದಯ ಸದನ ಜಿತನೇಕಮದನ
ಮಂದಮತಿ ಜರಾಸಂಧನಂಗವ ಸೀಳಿದನ ಬಹು ಬಲ್ಲಿದನ ||೨||
ಮುದ್ದು ಮುಖವ ನೋಡಿ ತಿದ್ದಿ ಮಾಡಿದ ಮೈಸಿರಿಯ ಈ ನಮ್ಮ ದೊರೆಯ
ಒದ್ದಕ್ಷಕುವರನ ಗುದ್ದಿಬಿಸುಟ ಹೊಂತಕಾರಿಯ ಭಾರತಿ ದೊರೆಯ
ಶುದ್ಧಾನಂದ ಸಮುದ್ರ ಶ್ರೀಕೃಷ್ಣಗೆ ಕಿರಿಯ ಮಿಕ್ಕ ಜಗಕ್ಹಿರಿಯ
ಅದ್ವೈತಶಾಸ್ತ್ರದ ಸದ್ದಡಗಿಸಿದ ಆರ್ಯಾ ನಮ್ಮ ಮಧ್ವಾಚಾರ್ಯಾ ||೩||
***
Dhirana nodirai
karunaporana padirai ||pa||
Varijavadana samiraja kapinrupa
dvijana bhavi ajana ||a.pa||
Kanakalandige oppuva sara kanthamaniya vajrada khaniya
maniyada bahala kathina ditijaranella haniyabekemba dhaniya
pranatisi narayana pada bhaktagraniya chintamaniya
trunikrutamarapativiso madhava paniya kapishiromaniya ||1||
Mandasmitayuta kundakutmala samaradana purnachandravadana
indudharadisura vrundavandita padayugana hastayudhana
bandikruta surasundari samudaya sadana jitanekamadana
mandamati jarasandhanangava silidana bahu ballidana ||2||
Muddu mukhava nodi tiddi madida maisiriya i namma doreya
oddakshakuvarana guddibisuṭa hontakariya bharati doreya
shuddhananda samudra srikrishnage kiriya mikka jagakhiriya
advaitashastrada saddadagisida arya namma madhvacharya ||3||
***
ಧೀರನ ನೋಡಿರೈ ಕರುಣಾಪೂರನ ಪಾಡಿರೈ ಪ
ವಾರಿಜವದನ ಸಮೀರಜ ಕಪಿನೃಪ, ದ್ವಿಜನ ಭಾವಿ ಅಜನ ಅ.ಪ
ಕಣಕಾಲಂದಿಗೆ ಒಪ್ಪುವ ಸರ, ಕಂಠಮಣಿಯ ವಜ್ರದ ಖಣಿಯಮಣಿಯದ ಬಹಳ ಕಠಿಣ ದಿತಿಜರನೆಲ್ಲ ಹಣಿಯಬೇಕೆಂಬ ಧಣಿಯಪ್ರಣತಿಸಿ ನಾರಾಯಣ ಪದ ಭಕ್ತಾಗ್ರಣಿಯ, ಚಿಂತಾಮಣಿಯತೃಣೀಕೃತಮರಪತಿವಿಶೋ(?) ಮಾಧವ ಫಣಿಯಕಪಿಶಿರೋಮಣಿಯ-1
ಮಂದಸ್ಮಿತಯುತ ಕುಂದಕುಟ್ಮಲಸಮರದನ ಪೂರ್ಣಚಂದ್ರವದನಇಂದುಧರಾದಿಸುರ ವೃಂದವಂದಿತ ಪದಯುಗನ ಹಸ್ತಾಯುಧನಬಂದೀಕೃತ ಸುರಸುಂದರೀ ಸಮುದಯ ಸದನ ಜಿತನೇಕಮದನಮಂದಮತಿ ಜರಾಸಂಧನಂಗವ ಸೀಳಿದನ ಬಹು ಬಲ್ಲಿದನ 2
ಮುದ್ದು ಮುಖವ ನೋಡಿ ತಿದ್ದಿ ಮಾಡಿದಮೈಸಿರಿಯ ಇನ್ನೊಮ್ಮೆ ದೊರೆಯಒದ್ದಕ್ಷಕುವರನ ಗುದ್ದಿಬಿಸುಟ ಹೊಂತಕಾರಿಯ ಭಾರತಿ ದೊರೆಯಶುದ್ಧಾನಂದ ಸಮುದ್ರ ಶ್ರೀಕೃಷ್ಣಗೆ ಕಿರಿಯ ಮಿಕ್ಕ ಜಗಕ್ಹಿರಿಯಅದ್ವೈತಶಾಸ್ತ್ರದ ಸದ್ದಡಗಿಸಿದ ಆರ್ಯಾ ನಮ್ಮ ಮಧ್ವಾಚಾರ್ಯಾ 3
***