by ಪ್ರಾಣೇಶದಾಸರು
ನಿನಗೆ ತಿಳಿದಂತೆ ಮಾಡುವದಯ್ಯ ಬೇಡೆನಲು |ಯನಗೆ ಸ್ವಾತಂತ್ರ್ಯವುಂಟೇ ||ಮನಸಿಜಪಿತ ನಿನ್ನ ಮೀರಿ, ಸಿರಿ, ವಿಧಿ,ಶರ್ವ|ತೃಣ ಮುರಿಯೆ ಶಕ್ತರಲ್ಲಾ ಹರಿಯೇ ಪ
ಅಪಮಾನ ಮಾಡಿಸೊ ಕೋಪವನೆ ಹೆಚ್ಚಿಸೊಕೃಪಣತನದಲ್ಲಿರಿಸೊ |ಅಪಹಾಸಗೈದಿಸೋ ಡಾಂಭಿಕದವನೆನಿಸೋಉಪವಾಸದಲ್ಲೇ ಇರಿಸೊ |ಕೃಪೆಯುಳ್ಳ ನರನೆನಿಸೋ ಮಾನವೆಗ್ಗಳ ಕೊಡಿಸೊಚಪಲ ಬುದ್ಧಿಯನೆ ಕಲಿಸೊ |ಅಪರಾಧವನೆ ಹೊರಿಸೊ ಬಲು ಭಯವ ತೋರಿಸೋತ್ರಿಪುರಾಂತಕರ್ಚಿತ ಪದ ಹರಿಯೇ 1
ಬೈಸು ಬೈದಾಡಿಸೊ ಬಾಂಧವರನಗಲಿಸೊಹೇಸಿಕೆಯು ಲಜ್ಜೆ ತೋರಿಸೊ |ಗ್ರಾಸವನೇ ಉಣಿಸೋ ನರರಾಲಯವ ಕಾಯಿಸೋಕ್ಲೇಶನಿತ್ಯದಲಿ ಬಡಿಸೊ |ಆಶೆಯನು ಜರಿಸು ಕೈಕಾಲುಗಳ ಕುಂಠಿಸೊದೋಷಕ್ಕೆ ಮನವಂಜಿಸೋ |ವಾಸುದೇವನೆ ನಿನ್ನ ವ್ರತವ ಮಾಡಿಸುವಂದುದೇಶ ಬಹುಕಡೆಗೆ ತಿರುಗಿಸೊ ಹರಿಯೇ2
ಕವನಗಳ ಪೇಳಿಸೊಕರ್ಮಬಾಹಿರನೆನಿಸೊಭುವನದೊಳು ಭಂಡನೆನಿಸೊ |ಕವಿಸು ಅಜ್ಞಾನವನು ಸನ್ಮತಿಯ ಪ್ರೇರಿಸೊಕಿವಿ ಮಾತ್ರ ದೃಢದಲಿರಿಸೋ |ಜವನ ಸದನದ ಪೊಗಿಸೋ ಬಂಧಾನದೊಳಗಿರಿಸೊತವ ದಾಸರೊಳು ಕೂಡಿಸೊ |ದಿವಿಜರೊಲ್ಲಭ ನ್ಯಾಯವನ್ಯಾಯವನೆಮಾಡುಭವಪಂಕದೊಳು ಮುಳುಗಿಸೋ ಹರಿಯೇ 3
ಹೆತ್ತವರ ಸೇವೆ ಮಾಡಿಸೊ ನೀಚರ ಬಳಿಯತೊತ್ತು ಕೆಲಸವ ಮಾಡಿಸೋ |ಚಿತ್ತ ಚಂಚಲಗೊಳಿಸೊ ವೈರಾಗ್ಯ ಪುಟ್ಟಿಸೊಉತ್ತಮರ ನೆರೆಯಲಿರಿಸೊ |ಮುತ್ತಿನಾಭರಣಿಡಿಸೊ ತಿರುಕೆಯನೆ ಬೇಡಿಸೊವಿತ್ತಸಂಗ್ರಹ ಮಾಡಿಸೊ |ಮುತ್ತೆಗೊಲಿದಿಹನೆ ವಿಷ ಕುಡಿಸೊ ಅಮೃತವುಣಿಸೊಮತ್ತೊಬ್ಬರಾರು ಗತಿಯೋ ಹರಿಯೇ 4
ಸಾಲಗೊಯ್ಯನಮಾಡುಕಂಡ ಕುಲದಲಿ ತಿನಿಸುಕೀಳು ಮನುಜರ ಪೊಂದಿಸೋ |ನಾಲಿಗೆಗೆಡಕನೆನಿಸೊ ಸತ್ಯ ವಚನಿಯು ಎನಿಸೊಸ್ಥೂಲ ಪುಣ್ಯವ ಮಾಡಿಸೋ |ಕೇಳಿಸೋ ಸಚ್ಛಾಸ್ತ್ರ, ನೀತಿಯರಿಯನು ಎನಿಸೋಆಲಯದಿ ಸುಖದಲಿರಿಸೋ |ಮೂಲೋಶ ಪತಿಯೆಹರಿಕುದುರೆಯೇರಿಸೊ ಮತ್ತೆಕಾಲು ನಡಿಗೆಯಲೆ ನಡೆಸೊ ಹರಿಯೇ 5
ಅರಸು ಪದವಿಯ ಕೊಡಿಸೊಕಾಷ್ಠಭಾರವ ಹೊರಿಸೊಪರದೂಷಣೆಯ ಮಾಡಿಸೊ |ಮರ್ಯಾದೆಗಳು ತಿಳಿಸು ಅತಿಮೂಢನೆಂದೆನಿಸೊನಿರುತ ರೋಗದಲಿ ಇರಿಸೋ |ಕರೆಕರೆಯ ಹಿಂಗಿಸೊ ದಿವ್ಯ ವಸನವನುಡಿಸೊಸುರಗಂಗಿ ತಡಿಯೊಳಿರಿಸೊ |ಪರಮಾತ್ಮನೆ ವಂಧ್ಯನೆನಿಸೊ ಸುತರನ್ನೆ ಕೂಡೊಮರಿಸೋ ದುರ್ವಿಷಯಗಳನೂ ಹರಿಯೆ6
ಮಾಕಾಂತ ಪ್ರಾಣೇಶ ವಿಠಲ ನೀನಿತ್ತುದಕೆಶೋಕಿಸಲು ಸಲ್ಲದಯ್ಯ |ಆ ಕುಂಭೀಪಾಕ ಮೊದಲಾದ ನರಕದೊಳೆನ್ನಹಾಕಿದರೂ ಒಳಿತೆ ಜೀಯಾ |ಈ ಕಲಿಯುಗದಿಪಂಚಭೇದತಿಳಿಯದ ದೈತ್ಯರಾಕುಲದೊಳಿರಿಸಬೇಡ |ಶ್ರೀ ಕಾಳೀಕಾಂತನರ್ಚನೆ ಸರ್ವ ಕಾಲದಲಿಬೇಕುಬಿನ್ನಪಲಾಲಿಸೋ ಹರಿಯೇ 7
********