ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಪ
ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ ಹಂಬಲಿಸಿ ನೋಡಿರ್ಯೋ ಗುಂಭ ಗುರುತವ 1
ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ ಥಳಥಳಗುಡುತ ಸುಳುವು ತೋರುತಲ್ಯದೆ ಝಳಝಳಿಸುವ ಪ್ರಭೆ ಮಳೆಮಿಂಚುಗಳು 2
ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ ಅಡಿಮೇಲು ತಿಳಿಯದೆ ಎಡಬಲದೊಳಾದ ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ 3
***