Showing posts with label ದಯಮಾಡಮ್ಮ ದಯಮಾಡಮ್ಮ ಹಯವದನನ kamalanabha vittala DAYAMAADAMMA DAYAMAADAMMA HAYAVADANANA. Show all posts
Showing posts with label ದಯಮಾಡಮ್ಮ ದಯಮಾಡಮ್ಮ ಹಯವದನನ kamalanabha vittala DAYAMAADAMMA DAYAMAADAMMA HAYAVADANANA. Show all posts

Monday, 1 November 2021

ದಯಮಾಡಮ್ಮ ದಯಮಾಡಮ್ಮ ಹಯವದನನ ankita kamalanabha vittala DAYAMAADAMMA DAYAMAADAMMA HAYAVADANANA

BY ಡಗುರುಕಿ ಜೀವೂಬಾಯಿ

ದಯಮಾಡಮ್ಮ ದಯಮಾಡಮ್ಮ ಹಯವದನನ ಪ್ರಿಯೆ ಪ

ವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪ

ಶಂಬರಾರಿಪಿತನ ರಾಣಿ ನಂಬಿಸ್ತುತಿಸುವೆಅಂಬುಜನಾಭನ ಧ್ಯಾನಸಂಭ್ರಮಎನಗೀಯೆ1

ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ 2

ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ 3

ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ 4

ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ 5
****