Showing posts with label ಯಾದವ ಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ neleyadikeshava. Show all posts
Showing posts with label ಯಾದವ ಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ neleyadikeshava. Show all posts

Wednesday, 1 September 2021

ಯಾದವ ಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ankita neleyadikeshava

..

ರಾಗ - :  ತಾಳ -


ಯಾದವಗಿರಿವಾಸನಹುದೊ ಶ್ರೀ ನಾರಸಿಂಹ

ಆದಿನಾರಾಯಣ ಅಚ್ಯುತನಹುದೊ ll ಪ ll


ಖಳಸೋಮಕನ ಕೊಂದು ನೀರ ಮುಳುಗಿ ಬಂದೆ

ಇಳೆಯೊಳು ಸುರಾಸುರರು ಬಂದು ನೆರೆಯಲು

ಘಳಿಲನೆ ದೇವಜನರು ಬಂದು ನಿಲ್ಲಲು

ವ್ಯಾಳೇಶನ ಸುತ್ತಿ ಸೆಳೆವ ವೇಳೆಯೊ

ಳಿಳಿದು ಪಾತಾಳಕ್ಕೆ ಪೊಗುತಿರಲು ಕಂಡು

ನಳಿನನಾಭನೆ ನಿನ್ನ ನೆನೆಯಲಾ ದನಿಗೇಳಿ 

ತಿಳಿದು ಕೂರ್ಮರೂಪಾಗಿ ಭೂಮಿಯ ಪೊತ್ತು

ಉಳುಹಿದೆ ಲೋಕವ ಉನ್ನತ ಪರಾಕ್ರಮಿ

ಖಳನು ಕಶ್ಯಪ ಬಂದು ಇದಿರಿಲ್ಲ ತನಗೆಂದು

ಇಳೆಯ ಕದ್ದೊಯ್ದ ಫೋಗೆ ಸುರರು ಕೂಡಿ

ಘಳಿಲನೆ ನಿನ್ನ ಕೂಗೆ ಮೊರೆಯನು ಕೇಳಿ

ತಳೆತು ಕೋಪಾಗ್ನಿಯಾಗ ವರಹನು ಆಗಿ

ಸೆಳೆದು ದೈತ್ಯನ ಬೇಗ ಕಾಯ್ದೆಯೊ

ನಳಿನಾಕ್ಷ ತ್ರೈಜಗವ ಪಾವನಮೂರ್ತಿ

ಖಳದೈತ್ಯವನಸಂಹಾರ ಪಾಪವಿದೂರ 

ನಳಿನೋದ್ಭವ ಮಾರನಯ್ಯ ಚಲುವರಾಯ ll 1 ll


ಹಟದೊಳು ಪ್ರಹ್ಲಾದ ದಿಟಹರಿಯೆಂದೆನೆ

ಕುಟಿಲದೈತ್ಯನು ಪೀಡಿಸಿ ಕೇಳಲವನು

ಕಠಿಣಬುದ್ಧಿಯ ಬಿಡು ಗಳಿಸದಿರವಗುಣ

ವಟಪತ್ರಶಯನನೆ ವಂದ್ಯನೆಂದೆನಲಾಗಿ

ಸಟೆಯೆಂದು ದೈತ್ಯನು ವಟುವ ನಿಗ್ರಹದಿಂದ 

ನಟಿಸಿ ಕೇಳಲು ಹರಿಸರ್ವೋತ್ತಮನೆಂದು 

ಪಠಿಸಲ್ಕೆ ಪರಮಭಕ್ತನ ಕಾಯಬೇಕೆಂದು

ದಿಟವಂದಜಾಂಡಂಗಳೊಡೆವ ರೌದ್ರವ ತಾಳಿ

ನಟಿಸಿ ಕಂಬದೊಳ್ಮೂಡಿ ನಗುವ ಭಕ್ತನ ನೋಡಿ

ಕುಟಿಲ ದಾನವನೋಡಲು ಪಿಡಿದೆಳೆತಂದು 

ನಿಟಿನಿರುನಿಟಿಲೆನಲು ಉಗುರಲಿ ಸೀಳಿ

ಪುಟನೆಗಹಿದೆ ಪಾದವ ಬಲಿಯನು ಮೆಟ್ಟಿ

ನಟನೆಯಾಡುವ ವಿದ್ಯವನೆಲ್ಲಿ ಕಲಿತೆ ಕ-

ಪಟಿ ವಿಪ್ರನ ವೇಷವ ಭಾರ್ಗವನೆಂಬ

ಪಟುತರ ಪರಾಕ್ರಮವ ತೋರಿಸಿ ಕ್ಷತ್ರಿಯ

ಘಟವ ಸಂಹರಿಸಿದ ಗರುವ ಚಲುವರಾಯ ll 2 ll


ಇಂದಿರೇಶನೆ ನಿನ್ನ ನಂಬಿದ ವಿಭೀಷಣಗೆ

ಎಂದಿಗು ಪತನವಿಲ್ಲದ ಪದವಿಯನಿತ್ತೆ

ಕಂದನಾದೆ ವಸುದೇವ ದೇವಕಿಯರೊಳು

ನಂದಗೋಕುಲದೊಳು ನಿಂದು ಕಂಸನ ಕೊಂದೆ

ಚಂದದಿ ಗೋವರ್ಧನೋದ್ಧಾರನೆನುತಾಗ

ಸಂಧಿಸಿ ಪೂಮಳೆಗರೆಯಲಮರರೆಲ್ಲ 

ಚೆಂದುಳ್ಳ ಸತಿಯರ ವ್ರತವನಾಕ್ರಮಿಸಿದೆ

ಚಂದ್ರಹೆರೆಯ ಪೋಲ್ವ ಚೆಲ್ವವನಿತೆಯಾಗಿ

ಕೊಂದೆ ಭಸ್ಮಾಸುರನ ಅಶ್ವವನೇರಿ

ಬಂದೆಯೀಧರೆಯ ಮೇಲೆ ಕೃತಯುಗದೊಳು

ನಿಂದು ಯಾದವಗಿರಿಯ ಮೇಲೆ ತ್ರೇತಾಯುಗದೊ

ಳಂದು ರಾಮ ಪ್ರಿಯನಾದೆ ದ್ವಾಪರಯುಗದೊಳು

ಬಂದು ಕೃಷ್ಣನೆನಿಸಿಕೊಂಡೆ ಕಲಿಯುಗದೊಳು

ನಿಂದು ಚಲ್ವರಾಯನಾದೆ ವರನಂದಿಯ

ಚಂದದಿ ರಕ್ಷಿಸಿದ ಹಾಗೆ ಎನ್ನನು ಕಾಯೊ

ಇಂದಿರೇಶ ನೆಲೆಯಾದಿಕೇಶವರಾಯ ll 3 ll

***


ಯಾದವಗಿರಿವಾಸನಹುದೋ ಶ್ರೀ ನಾರಸಿಂಹಆದಿನಾರಾಯಣ ಅಚ್ಯುತನಹುದೊ ಪ


ಖಳ ಸೋಮಕನ ಕೊಂದು ನೀರ ಮುಳುಗಿ ಬಂದೆಇಳೆಯೊಳು ಸುರಾಸುರರೈತಂದು ಬೆರೆಯಲುಘಳಿಲನೆ ದೇವಜನರು ಬಂದು ನಿಲ್ಲಲುವ್ಯಾಳೇಶನ ಸುತ್ತಿ ಸೆಳೆವ ವೇಳೆಯಲ್ಲಿಇಳಿದು ಪಾತಾಳಕೆ ಪರುವತ ಪೋಪುದ ಕಂಡುನಳಿನನಾಭನೆ ನಿಮ್ಮ ನೆನೆಯಲಾ ಧ್ವನಿ ಕೇಳಿತಿಳಿದು ಕೂರ್ಮರೂಪಾಗಿ ಮಂದರವನು ಪೊತ್ತುಉಳಿಸಿದೆ ಲೋಕವನುನ್ನತ ಪರಾಕ್ರಮಿಖಳ ಹಿರಣ್ಯಕ ಬಂದು ಎದುರಾರು ತನಗೆಂದು ಇಳೆಯ ಕದ್ದೊಯ್ದು ಪೋಗುತಿರೆ ಸುರರದ ಕಂಡುಘಳಲನೆ ನಿಮ್ಮನು ಕೂಗಲಾ ಮೊರೆ ಕೇಳಿತಿಳಿದು ಶಾಂತ ಮೂರುತಿ ಆಗಿ ಪಾವಕ ಮೂರ್ತಿಕಳ್ಳ ದೈತ್ಯರ ಸಂಹಾರವ ಮಾಡಿದೆನಳಿನೋದ್ಭವನಯ್ಯ ಅಮರ ಚೆನ್ನಿಗರಾಯ 1


ಮಠದೊಳಗೆ ಪ್ರಹ್ಲಾದ ಹರನ ನಾಮ ಸ್ಮರಿಸದೆದಿಟದಿ ಹರಿಯ ನಾಮಾವಳಿಯ ನುತಿಪುದ ಕಂಡುಕುಟಿಲ ದಾನವ ನಿಟಿಲನೇತ್ರನ ಸ್ಮರಿಸೆನಲುಕಠಿಣ ನಿಲುವನು ಬಿಡದ ತರಳ ನಿನ್ನಯ ಗುಣವಪಠಿಸಲ್ಕೆ ಪರಮ ಭಕ್ತನ ಕಾಯ ಬೇಕೆಂದುನಟಿಸಿ ಕಂಬದಿ ಮೂಡಿ ನಗುವ ಭಕ್ತನ ನೋಡಿಸಟೆಯಲ್ಲ ಅಜಾಂಡಗಳೊಡೆವಂತೆ ಘರ್ಜಿಸೆಕುಟಿಲ ದಾನವನೋಡುವುದ ಕಂಡು ಎಳೆತಂದುಚಿಟಿಚಿಟಿ ಚಿಟಿರೆನ್ನಲು ಉಗುರಲಿ ಸೀಳಿಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟನಾಟಕ ಸೂತ್ರಧಾರಿ ನೀನಹುದು ಕ್ಷತ್ರಿಯರಚಟುಲ ಛಲದಿ ಒಗೆದು ಕರುಳ ಬಗೆದು ತುಳಿದ-ದಟರನು ಸಂಹರಿಸಿದ ಚೆಲುವರಾಯ 2


ಅಂದು ಕೌಸಲ್ಯಾ ಗರ್ಭ ಚಂದ್ರಮನಾಗಿ ಬೆಳಗಿಕೊಂದೆ ರಾವಣ ಕುಂಭಕರ್ಣಾದಿಗಳನೆಲ್ಲಇಂದಿರೇಶನೆ ನಿನ್ನ ನಂಬಿದ ವಿಭೀಷಣನಿಗೆಎಂದಿಗೂ ಪಾರವಿಲ್ಲದ ಪದವಿಯನಿತ್ತೆಕಂದನಾಗಿ ಜನಿಸಿ ವಸುದೇವ ದೇವಕಿಯರಿಗೆನಂದಗೋಕುಲದೊಳು ನಿಂದ ಕಂಸನ ಕೊಂದೆಚಂದಿರನ ನೆರೆಪೋಲ್ವ ಉನ್ನತೋನ್ನತನಾಗಿಕೊಂದು ತ್ರಿಪುರಾಸುರರ ಅವರ ಸತಿಯರ ಕೆಡೆಸಿಒಂದೆ ನೆಗೆತಕೆ ನೆಗೆವ ಅಶ್ವವನೇರಿದೆ ವ-ಸುಂಧರೆಯ ಮೇಲೆ ಲೀಲೆಯಾಡುತ ಕೃತಯುಗದಿನಿಂದು ಯಾದವಗಿರಿಯ ಮೇಲೆ ತ್ರೇತಾಯುಗದಿಬಂದು ರಾಮನೆನಿಸಿಕೊಂಡೆ ದ್ವಾಪರ ಯುಗದಿಬಂದು ಕೃಷ್ಣನೆನಸಿಕೊಂಡೆ ಕಲಿಯುಗದೊಳುನಿಂದು ಚೆಲುವ ಚೆನ್ನಿಗರಾಯನಾದೆ ವರನಂದಿಯ ಚಂದದಿಂ ರಕ್ಷಿಸಿದೆ ಎನ್ನ ಕಾಯೊಇಂದಿರಾಪ್ರಿಯ ಬಾಡದಾದಿಕೇಶವ ರಾಯ3

***