Showing posts with label ಈತನೇನೆ ನಿನ್ನ ಮಗನು ಸೀತಾಪತಿ ರಘುನಾಥನೆಂಬವನು neleyadikeshava. Show all posts
Showing posts with label ಈತನೇನೆ ನಿನ್ನ ಮಗನು ಸೀತಾಪತಿ ರಘುನಾಥನೆಂಬವನು neleyadikeshava. Show all posts

Wednesday, 1 September 2021

ಈತನೇನೆ ನಿನ್ನ ಮಗನು ಸೀತಾಪತಿ ರಘುನಾಥನೆಂಬವನು ankita neleyadikeshava

 ..

ಈತನೇನೆ ನಿನ್ನ ಮಗನು ಪ


ಸೀತಾಪತಿ ರಘುನಾಥನೆಂಬವನು ಅ


ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು 1


ಆನೆವಾಹನ ಪಿತನ ತಾಯನಳೆದೋನುಭಾನುಸುತಗೆ ಶಾಪವಿತ್ತವನುಕಾನನ ಜನನಿಯ ಕೊಂದು ಪ್ರಿಯದಲಿ ನಿ-ಧಾನದಿ ಶರಧಿ ಶಯನ ಮಾಡಿದಾತನು 2


ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ 3

***