Showing posts with label ಚರಣವೆಂಬ ದುರ್ಗಮ ದುರ್ಗ ಸೇರಿದೆ ಪರವೇನು ಎನಗಿನ್ನು ಅರಿಸೈನ್ಯಗಳಿಂದ vasudeva vittala. Show all posts
Showing posts with label ಚರಣವೆಂಬ ದುರ್ಗಮ ದುರ್ಗ ಸೇರಿದೆ ಪರವೇನು ಎನಗಿನ್ನು ಅರಿಸೈನ್ಯಗಳಿಂದ vasudeva vittala. Show all posts

Wednesday, 1 September 2021

ಚರಣವೆಂಬ ದುರ್ಗಮ ದುರ್ಗ ಸೇರಿದೆ ಪರವೇನು ಎನಗಿನ್ನು ಅರಿಸೈನ್ಯಗಳಿಂದ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಚರಣವೆಂಬ ದುರ್ಗಮ ದುರ್ಗ ಸೇರಿದೆ

ಪರವೇನು ಎನಗಿನ್ನು ಅರಿಸೈನ್ಯಗಳಿಂದ ಪ


ನಿಜಭಕ್ತ ಜನರಿಗೆ ಆಭಯವ ಕೊಡುವಂಥ

ಧ್ವಜವುಳ್ಳ ಪುರವಿದು ಪರರಿಗಸಾಧ್ಯ 1


ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು

ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ 2


ರಜವಿಲ್ಲ ತಮವಿಲ್ಲ ನಿತ್ಯ ನಿರ್ಮಲವಿದು

ಅಜ ಮೊದಲಾದವರು ಇಲ್ಲೆ ಸೇರುವರಯ್ಯ 3


ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ

ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ 4


ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ

ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ 5

***