Showing posts with label ಏನು ಕೌತಕ ಕೃಷ್ಣ ತಾನೆ ಕನಸಿನೊಳು purandara vittala. Show all posts
Showing posts with label ಏನು ಕೌತಕ ಕೃಷ್ಣ ತಾನೆ ಕನಸಿನೊಳು purandara vittala. Show all posts

Wednesday, 4 December 2019

ಏನು ಕೌತಕ ಕೃಷ್ಣ ತಾನೆ ಕನಸಿನೊಳು purandara vittala

ಪುರಂದರದಾಸರು
ರಾಗ ಸಾವೇರಿ. ಝಂಪೆ ತಾಳ

ಏನು ಕೌತುಕವೊ ಕೃಷ್ಣ ತಾನೆ ಕನಸಿನೊಳು
ಮಾನವರ ತೆರನಂತೆ ಮರುಳಾಡಿಸಿದನೆನ್ನ ||ಪ||

ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ
ಮುಂದೆ ಅದರಂದವನು ಎಲ್ಲ ತಾ ಪೇಳ್ದ
ಒಂದು ದೋಸೆಯ ತನಗೆ ತಂದು ಕೊಡು ಎಂದೆನಲು
ತಿಂದು ಮೀಸಲು ಕೊಡೆನು ಎಂದು ಹೇಳಿದನು ||

ಮೋಸ ಹೋದೆನು ನಾನು ದೋಸೆಯನು ಹರಿಗೆ ಆ-
ಪೋಶನವನಿಕ್ಕದಾಪೋಶಿಸಿದೆನು
ಮೀಸಲಾರದು ಅಹುದು ದೋಷವಿಲ್ಲೆಂದೆನುತ
ಆಸುರದ ಮಾತುಗಳ ವಾಸಿ ತೋರಿದನು ||

ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು
ಹೊಳೆಯೊಳಗೆ ಈಜಾಡಿ ನಲಿವುದನು ನೋಡಿ
ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ
ತೊಳಕೊಂಡು ಒಳಹಿಂಕಿ ಬಂದುದನು ಕಂಡೆ ||

ಈ ರೀತಿ ಸಿರಿವಾರಿಜಾಕ್ಷನು ಕೃಷ್ಣ
ತೋರಿದನು ಸ್ವಪ್ನ ಕಣ್ಣಾರೆ ನೋಡಿದನು
ಹಾರಿ ಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ
ಏರಿ ಬಂದುದು ಶುಭದ ವಾರಿಧಿಯು ಮುಂದೆ ||

ಈ ಮಹಾಮೂರ್ತಿಯನು ಜಾವ ಪರಿಯಂತರದಿ
ಕಾಮಿಸಿಯೆ ನೋಡಿದೆನು ಸೌಮನಸ್ಯದಲಿ
ಆ ಮಹಾಹರಿಯ ಪರಧಾಮವನು ಕೈಗೊಂಡು
ಭೂಮಿಪತಿಯಾಗಿರ್ದ ಪುರಂದರವಿಠಲ ||
***


pallavi

Enu kautukavo krSNa tAne kanasinoLu mAnavara teranante maruLADisidanenna

caraNam 1

hinde mADida padava ondu hELandenuta munde adarandavanu ellatA pELda
ondu dOseya tanage tandu koDu endenalu tindu mIsalu koDenu endu hELidanu

caraNam 2

mOsa hOdenu nnu dOseyanu harige AbhOshanavanikkadA pOshisideu
mIsalAradu ahudu dOSavillendenuta Asurada mAtugaLa vAsi tOridanu

caraNam 3

eLeya prAyadoLiruva celuveyorvaLu bandu hoLeyoLage IjADi nalivudanu nODi
naLina mukhiyanu mEle karesalA mailikeya toLakoNDu oLahinki bandudanu kaNDe

caraNam 4

I rIti siri vArijAkSanu krSNa tOridanu svapna kaNNAre nODidanu
hAri hOyitu kaSTa sUre koNDenu siriya Eri bandudu shubhada vAridhiyu munde

caraNam 5

I mahA mUrtiyanu jAva pariyantaradi kAmisiye nODidenu saumanasyadali
A mahA hariya paradhAmavanu kaikoNDu bhUmi patiyAgirda purandara viTTala
***

ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪ

ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1

ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2

ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3

ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4

ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
******