Showing posts with label ಹರಿಹರರಿಬ್ಬರು ಒಂದೇ vijaya vittala suladi ಹರಿಹರ ಸುಳಾದಿ. Show all posts
Showing posts with label ಹರಿಹರರಿಬ್ಬರು ಒಂದೇ vijaya vittala suladi ಹರಿಹರ ಸುಳಾದಿ. Show all posts

Sunday 8 December 2019

ಹರಿಹರರಿಬ್ಬರು ಒಂದೇ vijaya vittala suladi ಹರಿಹರ ಭೇದ ವಿವರ ಸುಳಾದಿ HARIHARARIBBAROO ONDE HARIHARA BHEDA VIVARA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಹರಿಹರಭೇದ ವಿವರ ಸುಳಾದಿ 

 ರಾಗ ಭೌಳಿ 

 ಧ್ರುವತಾಳ 

ಹರಿಹರರಿಬ್ಬರು ಒಂದೇ ರೂಪವ ಧರಿಸಿ 
ದುರುಳ ಗುಹಾಸುರನ ಕೊಂದರೆಂದೂ 
ಮರಳು ಮಾನವರು ತಿಳಿಯಾದೆ ನುಡಿವರು 
ಹರಿಹರರಿಬ್ಬರು ಒಂದಾಹರೆ
ಹರಿಹರರೀರ್ವರು ಏಕವಾದರೆ ಅಂದು
ಹರನು ಮೈಮರದು ನಿಂದನ್ಯಾತಕೆ 
ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ 
ಸುರರ ಓಡಿಸಿ ಪ್ರಬಲನಾಗಿರೆ 
ಪರಮಪುರುಷ ಹರಿ ನರಹರಿ ರೂಪವನ್ನು
ಧರಿಸಿ ರಕ್ಕಸನ್ನ ಕೊಲ್ಲುವಾಗಲಿ ಕೇ -
ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು
ಮೆರದಾನೇನೋ ಅವತಾರ ಮಾಡಿ 
ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ 
ಚರಿಸೂವ ಪರಬೊಮ್ಮ ಗುಣಪೂರ್ಣನೂ 
ತುರಗವದನ ಮತ್ಸ್ಯಕೂರ್ಮಸೂಕರ ವೇಷ 
ಧರಿಸಿದಾತನು ಕಾಣೋ ಯುಗಯುಗದೀ 
ಕರುಣಾಸಿಂಧು ನಮ್ಮ ವಿಜಯವಿಠ್ಠಲರೇಯಾ 
ಹರಿಹರ ರೂಪ ಧರಿಸಿದ ಕಾಣಿರೋ ॥ 1 ॥

 ಮಟ್ಟತಾಳ 

ದೀಪದ ಉಪಕಾರ ದಿನಪಗೆ ಏನಾಹದು
ಭೂಪತಿಗಾಳಿನ ಅನುಸರಣ್ಯಾತಕೆ
ಕೋಪವನು ತಾಳಿ ಭೃಗುಮುನಿ ಕೈಯಿಂದ 
ಶಾಪವ ಕೈಕೊಂಡನಂದು ಭಸ್ಮಾಸುರನ
ಆಪತ್ತಿಗಾರದೆ ಮೊರೆ ಇಡಲು ಕೇಳಿ 
ಶ್ರೀಪತಿ ವೇಗದಲಿ ಕಾಯದದ್ದು ಕಾಣರೆ
ಗೋಪಾಲ ವಿಜಯವಿಠಲ ಹರಿಹರ 
ರೂಪವು ತಾನಾದ ಅನೇಕ ರೂಪನೊ ॥ 2 ॥

 ತ್ರಿವಿಡಿತಾಳ 

ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ -
ಣಾಂತರದಲ್ಲಿ ಪೇಳುತಿವೆ ನೋಡಿಕೊ 
ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ -
ಕಾಂತ ನಖ ಮೌಳಿ ಅಭೇದಾನು 
ದಂತಿದನುಜ ವೈರಿ ಅರ್ಧಂಗವನೆ ತಾಳಿ 
ನಿಂತಿಪ್ಪ ಶ್ರೀ ಹರಿಯಾ ಕೂಡಾ -
ನಂತಾ ಕಲ್ಪಕೆ ನಿಗಮಾಗೋಚರ ಸರ್ವ -
ಸ್ವತಂತ್ರನು ಒಬ್ಬಾರ ಹಂಗಿಗಾನೆ 
ಚಿಂತಾಮಣಿಯಾ ಬಳಿಯಾ ನಾಡಹರಳನೆ ತಂದು 
ಸಂತತವಿಟ್ಟರೆ ಸರಿಯಾಗೋದೆ 
ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವದಕೆ 
ಚಿಂತೆ ಮಾಡಿದನೆಂಬೊ ವಾರ್ತಿಯೇನೂ
ಭ್ರಾಂತರಿಗೆ ನಿತ್ಯ ಮೋಹಕವನೆ ತೋರಿ 
ಅಂತು ಗಾಣದ ನರಕಕ್ಕೆ ಹಾಕೂವ
ದಂತಿವರದ ದೇವ ವಿಜಯವಿಠಲ ಜಗ -
ದಂತರಿಯಾಮಿಗೆ ಅಸಾಧ್ಯ ಒಂದಿಲ್ಲ ॥ 3 ॥

 ಅಟ್ಟತಾಳ 

ಹರಗೆ ಈ ಪ್ರತಾಪ ಉಳ್ಳರೆ ಭಸುಮಾ -
ಸುರಗಂಜಿ ಹರಿಗೆ ಮೊರೆ ಇಡುವನೇನೊ 
ಜರಸಂಧನಿಗೆ ಇತ್ತಾ ವರ ಮತ್ತೇನಾಯಿತು 
ಮರಳಿ ರಾಮನ ಕೂಡ ಶರಧನು ಪಿಡಿದು ಮೈ -
ಮರದು ನಿಂದದ್ದು ಸರ್ವ ಜಗವೆಲ್ಲ ಬಲ್ಲದು
ಕರಿರಾಜ ಆ ಮೂಲಾವೆಂದು ಕರೆವಾಗ 
ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ 
ಸುರರೊಳಗೀತಾಗಿಂದಧಿಕ ದೇವರು ಇಲ್ಲಾ 
ಹರಿಹರರೂಪಾ ಶ್ರೀವಿಜಯವಿಠಲರೇಯಾ 
ಚರಿತೆಯ ತೋರುವ ಅವರ ಯೋಗ್ಯತಾದಷ್ಟು ॥ 4 ॥

 ಆದಿತಾಳ 

ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು 
ಪಶುವಾಹನನಾಗಿ ಇಪ್ಪದಿದೆ 
ಅಸುರಾರಿಯಲ್ಲಾದೆ ಅನ್ಯ ರೂಪಗಳಲ್ಲ
ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ 
ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ 
ಶಶಿಧರ ಹರಿರೂಪದೊಳೂ ಕೂಡುವನೆ 
ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ 
ಕುಶಲ ಬಯಸುವನು ಸಮನನಾಗಿ ನಿಲ್ಲುವನೆ 
ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ -
ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ ॥ 5 ॥

 ಜತೆ 

ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ 
ರಂಗ ವಿಜಯವಿಠಲ ಹರಿಹರ ಮೂರುತಿ ॥
***********


ಹರಿಹರ ಸುಳಾದಿ
ಧ್ರುವತಾಳ
ಹರಿಹರರಿಬ್ಬರು ಒಂದೇ ರೂಪವ ಧರಿಸಿ |
ದುರುಳ ಗುಹಾಸುರನ ಕೊಂದರೆಂದೂ |
ಮರಳು ಮಾನವರು ತಿಳಿಯಾದೆ ನುಡಿವರು |
ಹರಿಹರರೀರ್ವರು ಏರವಾದರೆ ಅಂದು |
ಹರನು ಮೈಮರೆದು ನಿಂದನ್ಯಾತಕೆ |
ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ |
ಸುರರ ಓಡಿಸಿ ಪ್ರಬಲನಾಗಿರೆ |
ಪರಮ ಪುರುಷ ಹರಿ ನರಹರಿರೂಪವನ್ನು |
ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ |
ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು |
ಮೆರದಾನೇನೋ ಅವತಾರ ಮಾಡಿ |
ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ |
ಚರಿಸೂವ ಪರಬೊಮ್ಮ ಗುಣಪೂರ್ಣ ನೂ |
ತುರಗವದನ ಮತ್ಸ್ಯಕೂರ್ಮಸೂಕರ ವೇಷ |
ಧರಿಸಿದಾತನು ಕಾಣೋ ಯುಗಯುಗದೀ |
ಕರುಣಾಸಿಂಧು ನಮ್ಮ ವಿಜಯವಿಠಲರೇಯಾ |
ಹರಿಹರ ರೂಪ ಧರಿಸಿದ ಕಾಣಿರೋ 1
ಮಟ್ಟತಾಳ
ದೀಪದ ಉಪಕಾರ ದಿನಪಗೆ ಏನಾಹದು |
ಭೂಪತಿಗಾಳಿನ ಅನುಸುಣ್ಯಾತಕೆ |
ಕೋಪವನು ತಾಳಿ ಭೃಗುಮುನಿ ಕೈಯಿಂದ |
ಶಾಪನ ಕೈಕೊಂಡನಂದು ಭಸ್ಮಾ ಸುರನ |
ಆ ಪತ್ತಿಗಾರದೆ ಮೊರೆ ಇಡಲು ಕೇಳಿ |
ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ |
ಗೋಪಾಲ ವಿಜಯವಿಠಲ ಹರಿಹರ |
ರೂಪವು ತಾನಾದ ಅನೇಕ ರೂಪನೊ 2
ತ್ರಿವಿಡಿತಾಳ
ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ |
ಣಾಂತರದಲ್ಲಿ ಪೇಳುತಿವೆ ನೋಡಿಕೊ |
ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ |
ನಖ ಮೌಳಿ ಅಭೀದಾನು |
ವೈರಿ ಅರ್ಧಂಗವನೆ ತಾಳಿ |
ನಿಂತಿಪ್ಪ ಶ್ರೀ ಹರಿಯಾ ಕೂಡಾ |
ನಂತಾ ಕಲ್ಪರೆ ನಿಗಮಾ ಗೋಚರ ಸರ್ವ |
ಸ್ವತಂತ್ರನು ಒಬ್ಬಾರ ಹಂಗಿಗಾನೆ |
ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು |
ಸಂತತವಿಟ್ಟರೆ ಸರಿಯಾಗೋದೆ |
ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ |
ಚಿಂತೆಮಾಡಿದನೆಂಬೊ ವಾರ್ತಿಯೇನೂ |
ನಿತ್ಯ ಮೇಹಕವನೆ ತೋರಿ |
ಅಂತು ಗಾಣದ ನರಕಕ್ಕೆ ಹಾಕೂವ |
ದಂತಿ ವರದ ದೇವ ವಿಜಯವಿಠಲ ಜಗ |
ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ 3
ಅಟ್ಟತಾಳ
ಹರಗೆ ಈ ಪ್ರತಿಪ ಉಳ್ಳರೆ ಭಸುಮಾ |
ಸುರಗಂಜಿ ಹರಿಗೆ ಮೊರೆ ಇಡುವನೇನೊ |
ಜರಸಂಧನಿಗೆ ಇತ್ತಾವರ ಮತ್ತೇನಾಯಿತು |
ಮರಳಿ ರಾಮನಕೂಡ ಶರಧನು ಪಿಡಿದು ಮೈ |
ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು |
ಕರಿ ರಾಜಾ ಆ ಮೂಲಾವೆಂದು ಕರೆವಾಗ |
ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ |
ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ |
ಹರಿಹರರೂಪಾ ಶ್ರೀ ವಿಜಯವಿಠಲರೇಯಾ |
ಚರಿತೆಯ ತೋರುವ ಅವರ ಯೋಗ್ಯತಾದಷ್ಟು 4
ಆದಿತಾಳ
ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು |
ಪಶುವಾಹನನಾಗಿ ಇಪ್ಪದಿದೆ |
ಅಸುರಾರಿಯಲ್ಲದೆ ಅನ್ಯರೂಪಗಳಲ್ಲ |
ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ |
ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ |
ಶಶಿಧರ ಹರಿರೂಪ ದೊ[ಳು]ಕೂಡುವನೆ |
ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ |
ಕುಶನ ಬಯಸುವನು ಸಮನಾಗಿ ನಿಲ್ಲುವನೆ |
ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ |
ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ 5
ಜತೆ
ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ |
ರಂಗ ವಿಜಯವಿಠಲ ಹರಿಹರ ಮೂರುತಿ 6
*************