Showing posts with label ಬಾರೋ ಮನೆಗೆ ಮಾಧವಾ govinda. Show all posts
Showing posts with label ಬಾರೋ ಮನೆಗೆ ಮಾಧವಾ govinda. Show all posts

Thursday, 14 November 2019

ಬಾರೋ ಮನೆಗೆ ಮಾಧವಾ ankita govinda

by ಗೋವಿಂದದಾಸ
ಬಾರೋ ಮನೆಗೆ ಮಾಧವಾ | ದೇವರ ದೇವ |ಬಾರೋ ಮನೆಗೆ ಮಾಧವಾ ಪ

ಬಾರೋ ಮನೆಗೆ ದಯಾ | ತೋರೋ ಎನಗೆ ಜೀಯಾ |ವಾರಿಜನಯನಾ ಓ | ಕ್ಷೀರಾಭ್ದಿ ಶಯನನೇ ||ಬಾರೋ|| 1

ವೇದ ಗೋಚರ ನಿನ್ನಾ |ಪಾದನಂಬಿದ ಎನ್ನಾ |ಆದರಿಸೈ ಕರುಣೋದಯ ಮೂರುತೀ ||ಬಾರೋ|| 2

ಸಿಂಧುವಸನದೀಶಾ | ಸುಂದರಾಂಗ ವಿಲಾಸ |ಇಂದಿರೆಯರಸ ಗೋ | ವಿಂದದಾ¸Àನ ನಂದಾ ||ಬಾರೋ|| 3
******