Showing posts with label ಗುರುಗುರು ಎನುತಲಿ ಇರುವೆ ಬಾಗಿಲದೊಳು mahipati GURU GURU ENUTALI IRUVE BAAGILADOLU. Show all posts
Showing posts with label ಗುರುಗುರು ಎನುತಲಿ ಇರುವೆ ಬಾಗಿಲದೊಳು mahipati GURU GURU ENUTALI IRUVE BAAGILADOLU. Show all posts

Thursday, 2 December 2021

ಗುರುಗುರು ಎನುತಲಿ ಇರುವೆ ಬಾಗಿಲದೊಳು ankita mahipati GURU GURU ENUTALI IRUVE BAAGILADOLU

ಗುರು ಗುರು ಎನುತಲಿ ಇರುವೆ ಬಾಗಿಲದೊಳು

ಗುರುವಿನೆಂಜಲನುಂಡು ಸುಖಿಸುವೆ ನಮ್ಮಯ,
ಗುರುರಾಯರ ಮನೆಯ ನಾಯಿ ನಾನು ||

||೧|| ಹರಿಶರಣರ ಕಂಡು ಗರ್ವಿಸಿ ಕೆಲಿಯೇನಾ|
ವರಗೊಡೆ ಅಮ್ಮ ಸ್ವಜಾತಿ ನಮ್ಮಯ್ಯನ ||

||೨|| ಒಡೆಯನ ಮುಂದೆನ್ನ ವಡಲವ ತೋರುವೆ|
ಬಿಡದೇ ಅಂಗಳದೊಳ್ ಹೊರಳಾಡುವೆನಮ್ಮಯ ||

||೩|| ತಂದೆ ಮಹಿಪತಿ ಪ್ರಭೋ ಬಂಧು ಮೈದಡವೀಗ|
ಇಂದು ತನ್ನಯ ಬಿರುದು ಹಾಕಿದನಮ್ಮಯ ||
ಗುರುರಾಯರ ಮನೆಯ ನಾಯಿ ನಾನು ||
***