ಇಂದಿನ ಆರಾಧಕರಾದ
ಶ್ರೀ ಶೇಷದಾಸಾರ್ಯರ ಸ್ತುತಿಪದ ಶ್ರೀ ಶ್ಯಾಮಸುಂದರದಾಸರ ಕೃತಿ
ರಾಗ : ಸೌರಾಷ್ಟ್ರ ತಾಳ : ಆಟ
ಪೋಷಿಸು ಎನ್ನಯ ।
ದೋಷಗಳೆಣಿಸದೆ ದಾಸರಾಯ ।
ಶೇಷ ನಾಮಕನೆ । ವಿ ।
ಶೇಷ ಜ್ಞಾನವನೇಯೋ ದಾಸರಾಯ ।। ಪಲ್ಲವಿ ।।
ಸಂತತ ಕರಪಿಡಿ ।
ಸಂತರೊಡೆಯ ಗುರು ದಾಸರಾಯ ।
ಸಂತೋಷ ತೀರ್ಥರ ।
ಅಂತಃಕರುಣ ಪಾತ್ರ ದಾಸರಾಯ ।।
ಚಿಂತಿಪ ಜನರಿಗೆ ।
ಚಿಂತಾಮಣಿಯು ನೀನೆ ದಾಸರಾಯ ।
ಚಿಂತ ರಹಿತ ವರ ।
ಚಿಂತರವೇಲಿ ವಾಸ ದಾಸರಾಯ ।। ಚರಣ ।।
ಕುಂಭಿಣಿದೇವಕ ।
ದಂಬ ಸಂಸೇವಿತ ದಾಸರಾಯ ।
ಬೆಂಬಿಡದತಿ ಮನದ ।
ಹಂಬಲ ಪೂರೈಸು ದಾಸರಾಯ ।।
ನಂಬಿದ ದ್ವಿಜರಿಗೆ ।
ಶಂಭುಗಿರಿಯಲ್ಲಿ ದಾಸರಾಯ ।
ಬಾಂಬೋಳೆ ತೋರಿಸಿ ।
ಸಂಭ್ರಮಗೊಳಿಸಿದ ದಾಸರಾಯ ।। ಚರಣ ।।
ಹರಿಕೇತು ಹರಿಸುತ ।
ಹರಿಣಾಂಕ ಕುಲ ಜಾತ ದಾಸರಾಯ ।
ಹರಿಕೇತು ಹರುಸುತಾ ।
ದ್ಯರನ ಸಂಹರಿಸಿದ ದಾಸರಾಯ ।।
ಹರಿದಾಡುತಿಹ ಮನ ।
ಹರಿಯಲ್ಲಿ ನಿಲಿಸಯ್ಯ ದಾಸರಾಯ ।
ಹರಿವೈರಿಮತಕರಿ ಹರಿ ।
ಪರಿಹರಿಸಘ ದಾಸರಾಯ ।। ಚರಣ ।।
ಅರ್ಥ ಜನರ । ಇ ।
ಷ್ಟಾರ್ಥವ ಜಗದೊಳು ದಾಸರಾಯ ।
ಪೂರ್ತಿಸುವ ನಿನ್ನ ।
ವಾರ್ತಿ ಕೇಳಿ ಬಂದೆ ದಾಸರಾಯ ।।
ಪಾರ್ಥಿವ ವರುಷದಿ ।
ಪಾರ್ಥಸಾರಥಿ ನಿನ್ನ ಭವ್ಯ ದಾಸರಾಯ ।
ಮೂರ್ತಿ ಸ್ಥಾಪಿಸಿ ।
ಕೀರ್ತಿಯ ಪಡೆದಿ ದಿವ್ಯ ದಾಸರಾಯ ।। ಚರಣ ।।
ನೇಮ ನಿಷ್ಠೆಯ ಬಿಟ್ಟು ।
ಪಾಮರನಾದೆನಗೆ ದಾಸರಾಯ ।
ಶ್ರೀಮಧ್ವ ನಿಗಮಾರ್ಥ ।
ಪ್ರೇಮದಿ ತಿಳಿಸಯ್ಯ ದಾಸರಾಯ ।।
ಕಾಮಾದಿಷಡ್ವೈರಿ ।
ಸ್ತೋಮಾದ್ರಿಕುಲಿಶನೆ ದಾಸರಾಯ ।
ಕಾಮಿತ ಫಲದಾತ ।
ಶ್ಯಾಮಸುಂದರರ ದೂತ ದಾಸರಾಯ ।।
****
ಪೋಷಿಸು ಎನ್ನಯ । ದೋಷಗಳೆಣಿಸದೆ ದಾಸರಾಯ ।ಶೇಷ ನಾಮಕನೆ । ವಿ ।
ಶೇಷ ಜ್ಞಾನವನೇಯೋ ದಾಸರಾಯ ।। ಪ ।।
ಸಂತತ ಕರಪಿಡಿ ।ಸಂತರೊಡೆಯ ಗುರು
ದಾಸರಾಯ । ಸಂತೋಷ ತೀರ್ಥರ ।
ಅಂತಃಕರುಣ ಪಾತ್ರ ದಾಸರಾಯ ।।
ಚಿಂತಿಪ ಜನರಿಗೆ ।
ಚಿಂತಾಮಣಿಯು ನೀನೆ ದಾಸರಾಯ ।
ಚಿಂತ ರಹಿತ ವರ । ಚಿಂತರವೇಲಿ ವಾಸ
ದಾಸರಾಯ ।। ಚ ।।
ಕುಂಭಿಣಿದೇವಕ । ದಂಬ ಸಂಸೇವಿತ
ದಾಸರಾಯ । ಬೆಂಬಿಡದತಿ ಮನದ ।
ಹಂಬಲ ಪೂರೈಸು ದಾಸರಾಯ ।।
ನಂಬಿದ ದ್ವಿಜರಿಗೆ । ಶಂಭುಗಿರಿಯಲ್ಲಿ
ದಾಸರಾಯ । ಬಾಂಬೋಳೆ ತೋರಿಸಿ ।
ಸಂಭ್ರಮಗೊಳಿಸಿದ ದಾಸರಾಯ ।। ಚ ।।
ಹರಿಕೇತು ಹರಿಸುತ । ಹರಿಣಾಂಕ ಕುಲ ಜಾತ
ದಾಸರಾಯ । ಹರಿಕೇತು ಹರುಸುತಾ ।
ದ್ಯರನ ಸಂಹರಿಸಿದ ದಾಸರಾಯ ।।
ಹರಿದಾಡುತಿಹ ಮನ ।ಹರಿಯಲ್ಲಿ ನಿಲಿಸಯ್ಯ
ದಾಸರಾಯ । ಹರಿವೈರಿಮತಕರಿ ಹರಿ ।
ಪರಿಹರಿಸಘ ದಾಸರಾಯ ।। ಚ ।।
ಅರ್ಥ ಜನರ । ಇಷ್ಟಾರ್ಥವ ಜಗದೊಳು ದಾಸರಾಯ । ಪೂರ್ತಿಸುವ ನಿನ್ನ ।
ವಾರ್ತಿ ಕೇಳಿ ಬಂದೆ ದಾಸರಾಯ ।।
ಪಾರ್ಥಿವ ವರುಷದಿ । ಪಾರ್ಥಸಾರಥಿ ನಿನ್ನ
ಭವ್ಯ ದಾಸರಾಯ ।ಮೂರ್ತಿ ಸ್ಥಾಪಿಸಿ ।
ಕೀರ್ತಿಯ ಪಡೆದಿ ದಿವ್ಯ ದಾಸರಾಯ ।। ಚ।।
ನೇಮ ನಿಷ್ಠೆಯ ಬಿಟ್ಟು । ಪಾಮರನಾದೆನಗೆ
ದಾಸರಾಯ । ಶ್ರೀಮಧ್ವ ನಿಗಮಾರ್ಥ ।
ಪ್ರೇಮದಿ ತಿಳಿಸಯ್ಯ ದಾಸರಾಯ ।।
ಕಾಮಾದಿಷಡ್ವೈರಿ ।ಸ್ತೋಮಾದ್ರಿಕುಲಿಶನೆ
ದಾಸರಾಯ । ಕಾಮಿತ ಫಲದಾತ ।
ಶ್ಯಾಮಸುಂದರರ ದೂತ ದಾಸರಾಯ ।। ಪ ।।
****