Showing posts with label ಅಸೂಯೆ ಬಿಡಿಸೆನ್ನ ಮನಸಿನ others. Show all posts
Showing posts with label ಅಸೂಯೆ ಬಿಡಿಸೆನ್ನ ಮನಸಿನ others. Show all posts

Friday, 27 December 2019

ಅಸೂಯೆ ಬಿಡಿಸೆನ್ನ ಮನಸಿನ others

by ಬಡೇಸಾಹೇಬರು
ಅಸೂಯೆ ಬಿಡಿಸೆನ್ನ ಮನಸಿನ
ಅಸೂಯೆ ಬಿಡಿಸೆನ್ನ ||ಪ||
ಅಸೂಯೆ ಬಿಡಿಸೆನ್ನ, ಹೇಸಿಮನಸಿನ
ಈಶ ನಿನ್ನ ಪಾದ ದಾಸಾನುದಾಸನೆನಿಸೋ ||ಅ||

ಕೊಟ್ಟರು ಅಷ್ಟೆಯೆನಿಸೊ
ಕೊಡದೊದ್ದು ಅಟ್ಟಿದರಷ್ಟೆಯೆನಿಸೋ
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ
ಶಿಷ್ಟಗುಣಿತ್ತು ಪೊರೆ ಸೃಷ್ಟಿ ಮೇಲೆ ಹರಿ ||೧||

ಕಡುಸಿರಿ ಅಷ್ಟೆನಿಸೋ ಎನಗೆ ಬಂದ
ಬಡತನ ಅಷ್ಟೆನಿಸೋ
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ
ಅಡಿದೃಢವಿತ್ತು ಪೊಡವಿ ಮೇಲೆ ಹರಿ ||೨||

ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ
ಧ್ಯಾಸದಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ ||೩||
********