Showing posts with label ಅನಿಲತನುಜರಿಂದ ವನನಿಧಿ vijaya vittala ankita suladi ರಾಮೇಶ್ವರ ಮಹಾತ್ಮೆ ಸುಳಾದಿ ANILATANUJARINDA VANANIDHI RAMESHWARA MAHATME SULADI. Show all posts
Showing posts with label ಅನಿಲತನುಜರಿಂದ ವನನಿಧಿ vijaya vittala ankita suladi ರಾಮೇಶ್ವರ ಮಹಾತ್ಮೆ ಸುಳಾದಿ ANILATANUJARINDA VANANIDHI RAMESHWARA MAHATME SULADI. Show all posts

Wednesday 28 October 2020

ಅನಿಲತನುಜರಿಂದ ವನನಿಧಿ vijaya vittala ankita suladi ರಾಮೇಶ್ವರ ಮಹಾತ್ಮೆ ಸುಳಾದಿ ANILATANUJARINDA VANANIDHI RAMESHWARA MAHATME SULADI

 

Audio by Vidwan Sumukh Moudgalya


ಶ್ರೀವಿಜಯದಾಸಾರ್ಯ ವಿರಚಿತ  ರಾಮೇಶ್ವರ ಮಹಾತ್ಮೆ ಸುಳಾದಿ 


 ರಾಗ : ಕಾಂಬೋಧಿ 

 ಧ್ರುವತಾಳ 


ಅನಿಲತನುಜರಿಂದ ವನನಿಧಿಯಮ್ಯಾಲೆ 

ಮುನಿದು ಅಗಸ್ತ್ಯನು ಆಪೋಷಣವೆಗೊಳಗಾಗಿ 

ವನಚರಾದಿಗಳು ನೀರನು ಕಾಣಾದೆ ಬಳಲೆ 

ಅನಿಮಿಷ ಮಿಗಲಾದ ಗಣದವರು ಚಿಂತಿಸೆ 

ಮುನಿಸುತೆ ನದಿಯಾಗಿ ವಿನಯದಿಂದಲಿ ಬಂದು 

ಮುನಿ ಪುಂಗವಗೆ ವಂದಿನಿಯಾ ಮಾಡಾಲಾಗಿ 

ಘನವಾಗಿ ಅಳಿದು ಲವಣ ಸಾಗರೆನಿಸಾಲು 

ಅನುಮಾನದಲ್ಲಿ ವರುಣದೇವರು ನಿರುತಿದೆ 

ಮುನಿ ಸುರಪಾಲಕ ವಿಜಯವಿಠಲರೇ -

 ಯನ ದಯದಿಂದ ಉದ್ಧರಣೆಯಾದ ವನಧಿ 


 ಮಟ್ಟತಾಳ 


ಕೋಪದಲ್ಲಿ ಇದ್ದು ಲೋಪಮುದ್ರಾಪತಿ 

ಕೂಪಾರಗೆ ಇತ್ತಾ ಶಾಪವ ಪರಿಹರಿಸಿ, ವಿ 

ಶಾಪವನೆ ಕೊಟ್ಟು ಅಪಾರ ದಯದಿಂದ 

ಆ ಪಾವಕಜರಿಗೆ ತಾಪಸಿಗನು ಮುನಿದು 

ಶಾಪವನೀಯೆ ಕಪಿರೂಪವನು ಧರಿಸಿ 

ಶ್ರೀಪತಿ ವಿಜಯವಿಠಲರೇಯನ ಸೇವೆ 

ಆಪಾರವಾಗಿ ಲೋಪವಾಗದೆ ರಚಿಸೆ 


 ರೂಪಕತಾಳ 


ಒಂದು ದಿನ ವೈಕುಂಠ ಮಂದಿರಕೆ ಸನಕಸ 

ನಂದನರೂ ವೇಗ ಬಂದು ಬಾಗಿಲ ಮುಂದೆ 

ನಿಂದಿರಲಾಗಿ ಬ್ಯಾಡೆಂದು ಜಯ ವಿಜಯರು 

ಅಂದು ಪೇಳಲಾಜಾನಂದನರೂ ಶಾಪಾ 

ತಂದು ಇತ್ತರು ಕೋಪದಿಂದ ಖಳರಾಗನೆ 

ಒಂದು ಜನ್ಮವ ತೆತ್ತು ಹಿಂದಾದ ತುರುವಾಯ 

ಸಿಂಧು ನಡುವೆ ದಶಕಂಧರನೆಂದೆನಿಸೀ 

ಇಂದ್ರದ್ಯರನೆಲ್ಲಾ ಮುಂದುಗೆಡಿಸಿ 

ಶೋಕದಿಂದವರ ಬಳಲೀಸಿ 

ಮಂದರಧರ ಸಿರಿ ವಿಜಯವಿಠಲನಿಗೆ 

ಬಂದು ಬಿನ್ನೈಸಿದರಿಂದ್ರಾದಿಗಳಾಗ 


 ಝಂಪೆತಾಳ 


ಮನುಜವೇಷಧರಿಸಿ ಜನಪತಿ ದಶರಥಗೆ 

ತನುಜನಾಗಿ ಜನಿಸಿ ಮುನಿಯು ಕಾಯ್ದೂ ಶಿವನ 

ಧನುವನು ಮುರಿದು ಜನಕಜಿಯಕೂಡ ಮೆರೆದೂ 

ಅನುಜನೊಡನೆ ಚರಿಸಿ ಅನಿಲಜನ ನೋಡಿ 

ಇನಸುತನ ಕಾಯ್ದು ವನಧಿಯ ಬಂಧಿಸೀ ವಿಭೀ -

ಷಣನ ಮನ್ನಿಸಿದ ರಾವಣನ ಕೊಂದೂ 

ದಿನ ಕುಲೋತ್ತುಮ ರಾಮ ವಿಜಯವಿಠಲ ತನ್ನ 

ವನಿತೆ ಸಹಿತಲಿ ಮೆರೆದ ಅನಿಮಿಷರು ಸುಖಿಸೆ 


 ತ್ರಿವಿಡಿತಾಳ 


ಹಿಂದೆ ಬೊಮ್ಮನ ಸಿರ ಇಂದು ಶೇಖರನಿಗೆ 

ಬಂದು ಬಿಡದಿರಲು ಬಂದು ವ್ಯಾಕುಲದಿಂದ 

ಇಂದಿರಾಪತಿ ರಾಮಾಚಂದ್ರನ್ನ ಪಾದಾರ 

ವಿಂದ ತುತಿಸಿ ದೇವ ಅಂದು ಒಲಿದು ಇತ್ತ 

ಅಂದ ಭಾಷಿಗೆ ಹರಿಗೋವಿಂದ ಜನಸಿ, ದಶ 

ಕಂಧರಾದಿಯಾ ಕೊಂದು ಸಿಂಧು ತಡೆಯಲ್ಲಿ 

ಅಂಧಕ ರಿಪುವಿನ ಕಂದನಂತೆ ಮನ್ನಿಸಿ 

ದಂದದಲ್ಲಿ ರಾಮಚಂದ್ರ ಈಶನ ಸ್ಥಾಪಿಸಿ 

ಬಂದ ಬೊಮ್ಮ ಹತ್ಯಕ್ಕೆ ಒಂದು ಪಥವ ತೋರಿ 

ಸಿಂಧುವಿನಲಿ ಸೇತೂ ಬಂಧನದಲಿ ಶಿವ 

ನಿಂದರೆ ದೋಷವು ಹಿಂದಾಗುವದೆಂದು 

ಗಂಧ ಮಾದನಾದ್ರಿವಾಸ ವಿಜಯವಿಠಲ 

ಮಂದಗತಿಗಳಿಗೆ ಪರನೆಂದು ಶಿವನತೋರಿದಾ 


 ಅಟ್ಟತಾಳ 


ರಾಮನೆ ಬಂದು ಸಂಚರಿಸಿದ ಕಾರಣ 

ರಾಮೇಶ್ವರವೆಂಬೊ ನಾಮದಿಂದೀ ಕ್ಷೇತ್ರ 

ಭೂಮಿಯೊಳಗೆ ಪ್ರಕಾಶಿತವಾಯಿತು 

ಈ ಮಹೋದಧಿ ಸದಾ ಪವಿತ್ರವೆನಿಸಿತು 

ಆ ಮಹ ಚತುರ ವಿಂಶತಿ ತೀರ್ಥಂಗಳೂ 

ಕಾಮಿತಾರ್ಥವನಿತ್ತು ಸಲಹುತಲಿಪ್ಪವು 

ರಾಮನೆ ವಿಜಯವಿಠಲ ಪರದೈವ, ನಿ -

ಸ್ಸೀಮ ಕೋದಂಡ ದೀಕ್ಷಾಗುರು ಗುಣನಿಧಿ 


 ಆದಿತಾಳ 


ಕೋತಿಗಳಿಂದಲಿ ರಘುನಾಥ ಗಿರಿಗಳ ತರಿಸಿ 

ಸೇತು ಲಂಕೆಗೆ ಬಿಗಿಸಿ ಖ್ಯಾತನಾದಾ ಜಗದೊಳಗೆ 

ಪೂತೂರೆ ಈತನ ಮಹಿಮೆ 

ಭೂತನಾಥ ಕಾಣಲರಿಯ ದ್ವೈತಮತದವರಿಗೆ 

ಪ್ರೀತಿಯಹುದು ಮಾಯಿಗೇನೊ 

ಸೇತು ಮಾಧವರಾಮಾ ವಿಜಯವಿಠಲರೇಯಾ 

ಸೇತುಯಾತ್ರೆ ಮಾಡಿದವರಾವಾತನಿಂದ ಪಾಲಿಸುವಾ 


 ಜತೆ 


ಏನು ಸೋಜಿಗವೊ ಸೇತು ಮಹಾತ್ಮೆಯನ್ನು 

ದ್ಯುನಾಥ ಎಣಿಸುವ ವಿಜಯವಿಠಲನಿಂದ

******