by ಪ್ರಸನ್ನವೆಂಕಟದಾಸರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.
ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1
ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2
ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3
ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4
ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
********