..
ಜಯ ಜಯ ಭೀಮಸೇನ ಪ.
ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ.
ಕುಂತಿಜ ಕುಮುದಸಖನ ಕುಲತಿಲಕನೆಅಂತಕಾತ್ಮಜನನುಜನೆ ಅರ್ಜುನಾಗ್ರಜಕಿಂತು ಜೀಮೂತ ಪ್ರಚಂಡ ಮಾರುತ ತಾತಶಾಂತದಾನ ದ್ರುಪದನ ತನುಜೆಯ ನಿಜಕಾಂತ ದಿಗಂತ ವಿಶ್ವಾಂತ ಮಹಿಮ ಮಣಿಮಂತ ಅಂಬ ಸುವಿದಾರಿ ಸಹಜ ಬಲವಂತ ದುರ್ಜನ ಕುಠಾರಿ ಕೌರವಸೇನಾಕಾಂತಾರ ಪಾವಕ ದೀನೋದ್ಧಾರಿ1
ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2
ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3
ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4
ಭೀಮಭವಾರಣ್ಯ ಧೂಮಕೇತನೆನಮೋ ಶ್ರೀ ಮನೋಹರ ಗೋಪಾಲವಿಠಲನ್ನಪ್ರೇಮ ಪುಣ್ಯ ಪುತ್ರ ಸೂತ್ರ ಸಜ್ಜನ ಮಿತ್ರಶ್ರೀಮಂತ ಧೀಮಂತ ರಹಿತಾದಿಮಧ್ಯಾಂತಭೀಮ ವಿಕ್ರಮ ಸದ್ಭೀಮ ದುರ್ಜನರಿಗೆಭೀಮಾದಿ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
***