..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ
ಕಿಲಿಕಿಲಿ ನಗುವರೆ ಸಲಹುವದು ದೊರೆಯೆ ಪ
ಕೆಲರ ಮಾತಿಗೆ ಪೋಗಿ ಬಲವಾಗಿ ಅವರ
ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ 1
ಧರಣಿಯ ಪತಿಯೇವೆ ಶರಣೆಂದು ತಿಳಿದು
ಮರೆದೆನೊ ನಿನ್ನ ಪಾದ ಸಿರಿಯ ರಮಣನೆ2
ಉದರಗೋಸುವಾಗಿ ಮರೆದವರ ವಶದಿ
ಹದನವ ಕಳಕೊಂಡು ಮದಡ ನಾನಾದೆನೊ 3
ಉಣವೆನೊ ಪರರನ್ನ ದಣಿವೆನೊ ಅದಕ್ಕೆ
ಕುಣಿವೆನೊ ಅವರಂತೆ ಗುಣವೇನು ಎನಗೆ 4
ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ
ವಾಸವಿತ್ತು ಬದುಕಿಸೊ ವಾಸುದೇವವಿಠಲ 5
***