..
ನಮೋ ನಮೋ ಗುರು ಸುಶೀಲೇಂದ್ರ | ಶ್ರೀ ಸಂ
ಯಮಿ ಕುಲೋತ್ತಮ ಮಧ್ವಮತ ಸುಮತಾಬ್ಧಿ ಚಂದ್ರ ಪ
ಶ್ರೀ ಸುವೃತೀಂದ್ರ ಕುಮಾರ | ಜಿತ ಪೂತರ
ಭಾಸುರ ಚರಿತ ಉದಾರ
ಭೂಸುರ ಸೇವಿತಧೀರ | ಮೂಲ
ದಾಶರಥಿಯ ಪಾದಾಂಭೋಜಭಾರ 1
ಶ್ರೀರಾಘವೇಂದ್ರ ಪ್ರಿಯ ಗುರುವರದ
ತೀರ ಶೋಭಿಪರಿತ್ತಿ ಸುಕ್ಷೇತ್ರ ನಿಲಯ
ವಾರಿಜ ಸಖ ನಿಭಕಾಯ | ಭವ |
ದೂರ ದಯಾಂಬುಧಿ ದ್ವಿಜಕುಲ ಪರಿಯ 2
ಶಮಸುಂದರ ದಾಸಾಗ್ರಣಿಯೆ | ಬುಧ
ಸ್ತೋಮವಂದಿತ ಪದನತ ಸುರಮಣಿಯೆ
ಈ ಮಹಿಯೊಳು ನಿನಗೆಣೆಯೆ | ಮಮ
ಸ್ವಾಮಿ ಕುಮತ ಕುಲತಮಗೆ ದ್ಯುಮಣಿಯೆ 3
***