Showing posts with label ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ hayavadana. Show all posts
Showing posts with label ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ hayavadana. Show all posts

Wednesday, 1 September 2021

ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ ankita hayavadana

 ..

ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ

ಸಾರ ವೇದಗಳ ವಿಧಿಗಿತ್ತ

ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-

ತಾರಗಾರತಿಯ ಬೆಳಗಿರೆ 1


ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ

ತೋರಿ ಬೆನ್ನಾಂತ ಸುರನುತ

ತೋರಿ ಬೆನ್ನಾಂತ ಸುರನುತ ಕೂರ್ಮಾವ-

ತಾರಗಾರತಿಯ ಬೆಳಗಿರೆ 2


ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ

ಎತ್ತಿ ದಾಡೆಯಲಿ ನೆಗಹಿದ

ಎತ್ತಿ ದಾಡೆಯಲಿ ನೆಗಹಿದ ವರಾಹ-

ಮೂರ್ತಿಗಾರತಿಯ ಬೆಳಗಿರೆ 3


ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ

ಒಡಲ ಸೀಳಿದ ಹಿರಣ್ಯಕನ

ಒಡಲ ಸೀಳಿದ ಹಿರಣ್ಯಕನ ನರಸಿಂಹ

ಒಡೆಯಗಾರತಿಯ ಬೆಳಗಿರೆ 4


ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ

ಈ ಮೂರು ಜಗವ ಈರಡಿಯ

ಈ ಮೂರು ಜಗವ ಈರಡಿ ಮಾಡಿ ಅಳೆದ

ವಾಮನಗಾರತಿಯ ಬೆಳಗಿರೆ 5


ಅಂಬರಕೇಶನ್ನ ನಂಬಿದ ಕತ್ರಿಯರ

ಸಂಭ್ರಮ ಕುಲವ ಸವರಿದ

ಸಂಭ್ರಮ ಕುಲವ ಸವರಿದ ಪರಶುರಾ-

ಮೆಂಬಗಾರತಿಯ ಬೆಳಗಿರೆ 6


ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ

ತಂದ ರಾವಣನ ತಲೆಹೊಯ್ದ

ತಂದ ರಾವಣನ ತಲೆಹೊಯ್ದ ರಘುರಾಮ-

ಚಂದ್ರಗಾರತಿಯ ಬೆಳಗಿರೆ 7


ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ

ದುಷ್ಟ ಕಂಸನ್ನ ಕೆಡಹಿದ

ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ

ಕೃಷ್ಣಗಾರತಿಯ ಬೆಳಗಿರೆ 8


ರುದ್ರನ್ನ ತ್ರಿಪುರದೊಳಿದ್ದ ಸತಿಯರ

ಬುದ್ಧಿ ಭೇದಮಾಡಿ ಕೆಡಿಸಿದ

ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ

ಬೌದ್ಧಗಾರತಿಯ ಬೆಳಗಿರೆ 9


ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು

ತಾ ಪಿಡಿದು ಖಡ್ಗ ತುರಗವ

ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ-

ರೂಪಗಾರತಿಯ ಬೆಳಗಿರೆ 10


ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ

ಹತ್ತವತಾರಿ ಹಯವದನ

ಹತ್ತವತಾರಿ ಹಯವದನನ ಪಾಡುತ

ಚಿತ್ರದಾರತಿಯ ಬೆಳಗಿರೆ 11

***