Showing posts with label ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ jagannatha vittala KRISHNARAAYANE NINNA KRUTYAGALELLA SRUSHTIYOLAGE. Show all posts
Showing posts with label ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ jagannatha vittala KRISHNARAAYANE NINNA KRUTYAGALELLA SRUSHTIYOLAGE. Show all posts

Saturday 4 December 2021

ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ankita jagannatha vittala KRISHNARAAYANE NINNA KRUTYAGALELLA SRUSHTIYOLAGE



ಜಗನ್ನಾಥದಾಸರು

.ಕೃಷ್ಣರಾಯನೇ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಲ್ಯಾ ||ಪ|| 

ಶಿಷ್ಟರೊಳಗೆ ಇಟ್ಟು ಚಿರಕಾಲದಲ್ಲೆನ್ನ 
ಕಷ್ಟ ಬಿಡಿಸದೆ ಸುಮ್ಮನಿದ್ದಿಯಾ ಸ್ವಾಮಿ ||ಅ.ಪ|| 

ಜನನ ಮರಣ ಶೂನ್ಯನೆನಿಸಿಕೊಂಡು 
ಗೋಪಿ ತನಯನಾಗಿದದ್ದು ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು 
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು ||೧|| 

ದನುಜಭಂಜನನಾದ ಘನಮಹಿಮನೆ 
ಮಾಗಧನಿಗಂಜಿ ಓಡಿದ್ದು ಹೇಳಲ್ಯಾ 
ಎಣೆಯಿಲ್ಲದ ಶೂರಾ ರಣದೊಳು ಪಾರ್ಥಗೆ 
ಅನುಗನಾಗಿದದ್ದು ಹೇಳಲ್ಯಾ ನಾನು ||೨||

ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ 
ಮಿತವಾಗಿ ಕದ್ದದ್ದು ಹೇಳಲ್ಯಾ 
ಕೃತಿದೇವಿ ರಮಣನೆ ಅತಿ ಪ್ರೀತಿಯಲಿ ಗೋಪ 
ಸತಿಯರ ಕೂಡಿದ್ದು ಹೇಳಲ್ಯಾ ನಾನು ||೩||

ಶ್ರುತಿತತಿಗಳಭೇದ್ಯ ಪ್ರತಿಯಿಲ್ಲದ ದೇವ 
ಸತಿಗೊಶನಾದದ್ದು ಹೇಳಲ್ಯಾ 
ಶತಕ್ರತುವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು ||೪|| 

ಭೂತಳದೊಳು ದೇವತೆಗಳೊಡನೆ 
ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿ ರಹಿತ ಜಗನ್ನಾಥವಿಠ್ಠಲನೆ 
ಅದ್ಭುತ ಮಹಿಮನೆಂದು ಹೇಳಲ್ಯಾ ನಾನು ||೫||
***

Krishnarayane ninna krutyagalella
srushtiyolage na birallya ||pa|| 

Shishtarolage ittu chirakaladallenna 
kasta bidisade summaniddiya svami ||a.pa|| 

Janana marana shunyanenisikondu 
gopi tanayanagidaddu helalya
sanakadisevya pujyane turugala hindu 
vanadalli kaydaddu helalya nanu ||1|| 

Danujabhanjananada ghanamahimane 
magadhaniganji odiddu helalya
eneyillada shura ranadolu parthage 
anuganagiddu helalya nanu ||2||

Satata truptanagi kshitiyolu benneya 
mitavagi kaddaddu helalya 
krutidevi ramanane ati pritiyali gopa 
satiyara Kudiddu helalya nanu ||3||

Shrutitatigalabhedya pratiyillada deva 
satigoshanadaddu helalya
satakratuvidhivandya sutarapekshisi 
bhutapatiyannu bediddu helalya nanu ||4|| 

Bhutaladolu devategalodane 
intha ritili charisiddu helalya
bhiti rahita jagannathavittalane 
adbhuta mahimanendu helalya nanu ||5||
***

ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ
ಸೃಷ್ಟಿಯೊಳಗೆ ನಾ ಬೀರಲ್ಯಾ ಪ

ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ.

ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ
ತನಯನಗಿದ್ದುದ ಹೇಳಲ್ಯಾ
ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು
ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1

ದನುಜ ಭಂಜನನಾದ ಘÀನ ಮಹಿಮನೆ ಮಾಗ
ಧನಿಗಂಜಿ ಓಡಿದ್ದು ಹೇಳಲ್ಯಾ
ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ
ಅನುಗನಾಗಿದ್ದದ್ದು ಹೇಳಲ್ಯಾ ನಾನು 2

ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ
ಮಿತವಾಗಿ ಕದ್ದದ್ದು ಹೇಳಲ್ಯಾ
ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ
ಸತಿಯರ ಕೂಡಿದ್ದು ಹೇಳಲ್ಯಾ ನಾನು 3

ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ
ಸತಿಗೊಶನಾದದ್ದು ಹೇಳಲ್ಯಾ
ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ
ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4

ಭೂತಳದೊಳು ದೇವತೆಗಳೊಡÀನೆ ಇಂಥ
ರೀತಿಲಿ ಚರಿಸಿದ್ದು ಹೇಳಲ್ಯಾ
ಭೀತಿರಹಿತ ಜಗನ್ನಾಥವಿಠ್ಠಲನೆ ಅ
ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
***