Showing posts with label ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ mahipati. Show all posts
Showing posts with label ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ mahipati. Show all posts

Wednesday, 1 September 2021

ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 
ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 
ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 
ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 
ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 
ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 
ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
***