Showing posts with label ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ kamalanabha vittala. Show all posts
Showing posts with label ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ kamalanabha vittala. Show all posts

Friday, 27 December 2019

ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ ankita kamalanabha vittala

by ನಿಡಗುರುಕಿ ಜೀವೂಬಾಯಿ
ಭಗವಂತನ ಸಂಕೀರ್ತನೆ 

ಅಷ್ಟರೊಳಗೆ ಕೃಷ್ಣ ಬಂದನೆಸೃಷ್ಟಿಗೊಡೆಯ ದೇವನು ಪ

ಜಗದುದರಜಾÕನಿಗಳ ಧ್ಯಾನಕೆಗೋಚರಾಗೋಚರನಾಗುತ ಅಪ

ಅಂದಿಗೆ ಕಾಲ್ಗೆಜ್ಜೆ ಸರಪಣಿಬಂದಿ ಕಂಕಣ ತೋಳಬಾಪುರಿಮಂದಹಾಸ ಮುಂಗುರುಳು ಮುಖದಸುಂದರಾಂಗನ ಹುಡುಕುತಿರಲು 1

ತರಳರೊಡನೆ ಕೂಡಿ ಕೃಷ್ಣಮುರಳಿನಾದ ಗೇಯ್ಯುತಿರಲುಸರಸಿಜಾಕ್ಷನ ಕಾಣದೆ ತವಕಿಸಿಹರಿಯ ಹುಡÀುಕುತಿರಲೆಶೋದೆ 2

ವತ್ಸಗಳ ಬಾಲಗಳನೆ ಪಿಡಿದುಸ್ವೇಚ್ಛೆಯಿಂದ ನಲಿಯುತಿರಲುಅಚ್ಚುತನೆಲ್ಲೊ ಕಾಣೆನೆನುತಕೃಷ್ಣ ಕೃಷ್ಣನೆಂದು ಕರೆಯೆ 3

ಮನೆ ಮನೆಗಳ ಪೊಕ್ಕು ಪಾಲುಮೊಸರು ಬೆಣ್ಣೆ ಮೆಲುವೆನೆನುವವನಿತೆಯರಸಂತೈಸಿಕಳುಹಿತನಯನೆಲ್ಲೆಂದುಡುಕುತಿರಲು 4

ಬಂದನು ಬಲರಾಮ ಭಯದಿಇಂದಿರೇಶ ಮಣ್ಣು ಮೆಲುವನೆಂದು ಪೇಳೆ ಬಾಯ ತೆಗಿಸಿಕಂಡು ವಿಶ್ವವ ವಿಸ್ಮಯಗೊಳುತಿರೆ 5

ಸುರಗಂಧರ್ವರು ನೆರೆದರಂಬರದಿಪರಮಧನ್ಯಳೆಶೋದೆ ಎನುತಹರಿಯ ಗುಣಗಳನ್ನೆ ಸ್ತುತಿಸಿಹರುಷದಿಂದ ನಲಿಯುತಿರಲು 6

ಕಮಲಸಂಭವ ಜನಕನನೆತ್ತಿವಿನಯದಿಂದ ಮುದ್ದಿಸುತ್ತಿರೆಕಮಲನಾಭ ವಿಠ್ಠಲನ ಸಿರದಿಕಮಲಕುಸುಮಮಳೆಗರೆದರು7

ಮಂಗಳಂ ಜಯ ಮಂಗಳಂಶುಭಮಂಗಳಂ ಶ್ರೀ ಕೃಷ್ಣಗೇ
*******