..
ವಾಸುದೇವ ವಸುದೇವನಂದನ ಕೃಷ್ಣ ವಾಸುದೇವ ಪ
ಕುಸುಮಶರನ ಪಿತ ಅಸುರ ಮರ್ದನ ಕೃಷ್ಣ ವಾಸುದೇವ ಅ.ಪ
ಮಂದರ ಗಿರಿಧರ ಮಧುಸೂದನ ಕೃಷ್ಣ ವಾಸುದೇವಕುಂದದೆ ಪೋಗಿ ಕಂಸನ ಕೊಂದೆ ಶ್ರೀಕೃಷ್ಣ ವಾಸುದೇವ 1
ಶಿಶುವಾಗಿ ಪೂತಣಿಯಸುವ ಹೀರಿದೆ ಕೃಷ್ಣ ವಾಸುದೇವಶಿಶುಪಾಲಾಂತಕ ಯಶೋದೆನಂದನ ಕೃಷ್ಣ ವಾಸುದೇವ 2
ಮುರಹರ ಶರಣು ಹೊಕ್ಕೆನೊ ಕಾಯೊ ಶ್ರೀಕೃಷ್ಣ ವಾಸುದೇವಶರಣೆಂಬ ಜನರಿಗೆ ಕರುಣಿಪ ಶ್ರೀಕೃಷ್ಣ ವಾಸುದೇವ3
ಗರುಡ ಗಮನನಾಗಿ ಚರಿಸುವ ಶ್ರೀಕೃಷ್ಣ ವಾಸುದೇವಚರಣ ಕಮಲವನ್ನು ನಂಬಿದೆ ಶ್ರೀ ಕೃಷ್ಣ ವಾಸುದೇವ 4
ಶೇಷಶಯನ ನೀ ಪೋಷಿಸೊ ಶ್ರೀಕೃಷ್ಣ ವಾಸುದೇವಭಾಸುರಾಂಗನೆ ಭಕ್ತವತ್ಸಲ ಶ್ರೀಕೃಷ್ಣ ವಾಸುದೇವ5
***