..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ
ಮಾರಸುಂದರ ಸುಕುಮಾರ ಶರೀರನು ಅ.ಪ
ನೀರಮುಳುಗಿ ಬಂದು ಘೋರಪರ್ವತ ತಂದು
ಧಾರುಣಿಯನು ಕದ್ದ ದನುಜನ ಕೊಂದು
ನರಹರಿ ರೂಪದಿ ತರಳಗೊಲಿದುಪುಟ್ಟ
ಚರಣದಿಂ ಧರಣಿಯನಳೆದ ಮಹಾತ್ಮನೋ 1
ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು
ಮಡುಹಿ ಬಂದವನಿವನೇನೋ
ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ
ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ 2
ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ
ಚಿತ್ತಬಂದಂತೆ ತಾ ತಿರುಗುವನೋ
ಉತ್ತಮನಾದ ಶ್ರೀ ಪ್ರಾಣನಾಥವಿಠಲನು
ಎತ್ತನೋಡಿದರು ಸುತ್ತುತ್ತಲಿರುವನು 3
***