RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ಎನಗಾಧಾರಿ ಶ್ರೀಹರಿ ನೀನೆ ಎನಗಾಧಾರಿ ಪ
ಸಕಲ ಸುಖವ ಬೀರುವ ಉದಾರಿ ಭಕುತ ವತ್ಸಲ ಮುಕುಂದ ಮುರಾರಿ 1
ಅಂತರ್ಬಾಹ್ಯದ ಲೀಹ ನರಹರಿ ಕಂತುಪಿತನೆ ಪೀತಾಂಬರಧಾರಿ 2
ಹಿತದಾಯಕ ನೀನೆವೆ ಪರೋಪರಿ ಪತಿತಪಾವನ ಮಹಿಪತಿ ಸಹಕಾರಿ3
****