Showing posts with label ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ jagannatha vittala GURURAJA GURUSAARVABHOWMA NINNAYA PAADA. Show all posts
Showing posts with label ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ jagannatha vittala GURURAJA GURUSAARVABHOWMA NINNAYA PAADA. Show all posts

Thursday, 2 December 2021

ಗುರುರಾಜ ಗುರುಸಾರ್ವಭೌಮ ನಿನ್ನಯ ಪಾದ ankita jagannatha vittala GURURAJA GURUSAARVABHOWMA NINNAYA PAADA

ಗುರುರಾಜ ಗುರುಸಾರ್ವಭೌಮ
ಗುರುರಾಜ ಗುರುಸಾರ್ವಭೌಮ  ನಿನ್ನಯ  ಪಾದ
ಸರಸಿಜ  ಯುಗಗಬಿ   ನಮಿಸುವೆ  ।।

ಕರುಣಾ  ಸಾಗರನೆಂದು  ಚರಣವ  ನಂಬಿದೆ
ಶರಣನ  ಪಾಲಿಸೋ  ಕರುಣೀಯೇ
ಅನ್ಯರ  ಭಜಿಸದೆ  ನಿನ್ನನೇ  ಭಜಿಸುವೆ
ಎನ್ನ  ಮರಿಯೋದಿದು  ನ್ಯಾಯವೇ  ।।

ನಿನ್ನ  ಸೇವಿಪರಿಗೆ  ಇನ್ನುಂಟೆ  ಭಯ  ಶೋಕ
ಉನ್ನತ  ಸುಖದೊಳಗೆ  ಇರುವರೋ
ನಿನ್ನ ಸೇವಿಸಿ  ಭವ  ಬನ್ನ ಪಡುವದಿದು
ಎನ್ನ  ಅಪರಾಧವೇನಯ್ಯ  ।।       

ಹಿಂದಿನ  ಮಹಿಮದಿಂದೇನು  ಎನಗೈಯ್ಯ
ಇಂದು   ಮಹಾಮಹಿಮೆ  ತೋರಿಸೋ
ನಾತನು  ನೀನ್ನಲ್ಲೇ  ದೂತನು  ನಾನ್ನಲ್ಲೇ
ಯಾತಕ್ಕೆ   ಈ ತರ  ಮಾಡಿದಿ  ।।     

ಜ್ಞಾನಿಗಳರಸನೇ  ಮೌನಿಶಿರೋಮಣಿ 
ದ್ಯಾನವ  ಸಂತತ  ನೀಡಯ್ಯ 
ಸಂತತ  ಎನ  ಮನೋಂತರದಲಿ   ನೀ 
ನಿಂತು  ಪಾಲಿಸು  ಎನ್ನ  ಮಹರಾಯ ।।       

ನಿನ್ನಲ್ಲಿ  ಹರಿದಯ  ಉನ್ನತ  ಇರಲಿನ್ನು 
ಎನ್ನಲ್ಲಿ  ನಿನ ದಯ  ಇರಲಯ್ಯ 
ದಾತಗುರು  ಜಗನ್ನಾಥ  ವಿಠಲ  ನಿನ್ನ 
ಮಾತು  ಲಾಲಿಸಿದಂತೆ  ಪೊರೆಯನ್ನಾ  ।।
***

pallavi

gururAja guru sAravabhauma

anupallavi

gururAja guru sArvabhauma ninnaya pAda sarasija yugagabhi namisuve

caraNam 1

karuNA sAgaranendu caraNava nanvuidE sharaNana pAlisO karuNIya
anyara bhajisade ninnane bhajisuve enna marayOdiddu nyAyavE

caraNam 2

ninna sEviparige innuNTe bhaya shOka unnanta sukhadoLage iruvarO
ninna sEvisi bhava vanna paduvadiddu enna aparAdavEnayya

caraNam 3

hindina mahimadinda Enu enageyya indu mahamihimE tOrisO
nAtanu ninnalle dUtanu nAnallE yAtakkE I tara mADidi

caraNam 4

jnyAnigaLarasane mauni shirOmaNi dhyAnava santata nIDayya
santata enamanO antaradali nintu pAlisu enna mahArAyA

caraNam 5

ninnalli haridaya innanta iralinnu ennalli ninna daya irali ayyA
dAta guru jagannAtha viThala n inna mAtu lAlisidantE poreyennA
***

 ..

ಗುರುರಾಜ ಗುರುಸಾರ್ವಭೌಮ ಪ


ಗುರುರಾಜ ತವ ಪಾದ

ಸರಸಿಜಯುಗಲಕ್ಕೆ

ಮೊರೆಪೊಕ್ಕ ಜನರನ್ನ

ಪೊರೆ ಎಂದೇ ಅ.ಪ


ಶರಣ ಪಾಲಕನೆಂಬೊ - ಬಿರುದು ಬೀರುತಲಿದೆ

ಶರಣರ ಮರೆವೊದು ಥರವೇನೋ 1


ಸಾರಿದಜನರಘÀ ದೂರಮಾಡುವೆನೆಂಬೊ

ಧೀರರ ವಚನವು ಸಾರುತಿದೆ 2


ದೂರದೇಶದಿ ಜನ - ಸಾರಿ ಬಂದರೆ ವಿ -

ಚಾರಿಸಿ ಹರಕೆ ಪೊರೈಸುವೀ 3


ಕುಷ್ಟಾದಿ ಮಹರೋಗ ನಷ್ಟಮಾಡುತಲ -

ಭಿಷ್ಟೇಯ ಪೂರ್ತಿಪ ಮಹ ಶ್ರೇಷ್ಠನೆ 4


ಆದಿವ್ಯಾಧಿ ಉ-ಪಾಧಿ ಸಂಘಗಳನ್ನು

ಛೇದಿಸಿ ಜನರಿಗಾ ಮೋದ ಸಲಿಸುವಿ 5


ಸತಿಜನರಿಗೆ ಅತಿ ಹಿತದಿಂದ ಸುತರನ್ನ

ಸತತ ನೀಡುವಿ ಯತಿ ಕುಲನಾಥ 6


ಮತಿ ಹೀನ ಅತಿ ಮೂರ್ಖ ತತಿನಿನ್ನ ಭಜಿಸಲು

ವಿತತ ಭಕುತಿ ಜ್ಞಾನ ನೀಡುವೀ 7


ಮೂಕ - ಬಧಿರ - ಪಂಗು - ಏಕೋಭಾವದಿ ಸೇವೆ

ಏಕಮನದಿ ಮಾಡೆ ರಕ್ಷೀಪಿ 8


ಅವರ ಮನೋ ಬಯಕೆ ಹವಣಿಸಿ - ನೀಡುತ

ಅವನಿಯೊಳಗೆ ನೀ ಮೆರೆಯುವೀ 9


ಅಂಧಜನಕೆÀ ಚಕ್ಷು - ವಂಧ್ಯಜನಕೆ ಸುತರು

ಬಂದ ಬಂದವರರ್ಥ ಪೂರೈಸುವೀ 10


ಪರಮಂತ್ರ ಪರಯಂತ್ರ ಪರಕೃತ್ಯಪರಮಾಹಿ

ಪರಿಪರಿ ವ್ಯಥೆಗಳ ಹರಿಸುವೀ 11


ದುರುಳಜನರ ಬಾಧೆ ಮೊರಳುಮಾಯದ ಮೊದ್ದು

ಕಿರಳುಪದ್ರಗಳೆಲ್ಲ ಕಳೆಯುವೀ 12


ಕಾಮಿತ ಫಲಗಳ - ಕಾಮಿಪ ಜನರಿಗೆ

ಪ್ರೇಮದಿ ನೀಡುವೊ ಧ್ವರಿ ನೀನೇ 13


ಅನ್ನ ವಸನ ಧನ - ಧಾನ್ಯ ಹೀನರಗಿನ್ನು

ಮನ್ನಿಸಿ ನೀನಿತ್ತು ಸಲಹುವೀ 14


ಅಧಿಕಾರ ಕಳಕೊಂಡು

ಬದಕಲಾರದ ಜನ

ವದÀಗಿ ನಿನ್ನನು ಭಜಿಸೆ ಕರುಣಿಪೀ 15


ಆವ ಮಾನವ ನಿನ್ನ

ಸೇವೆ ಮಾಡುವನವ

ಕೋವಿದನಾಗುವ ನಿಶ್ಚಯಾ 16


ಇನಿತೆ ಮೊದಲಾದ

ಘನತರ ಮಹಿಮವು

ಜನರಿಗೆ ಶಕ್ಯವೆ ಗುರುರಾಯಾ 17


ಸುರತರು ಸುರಧೇನು

ವರಚಿಂತಾಮಣಿ ನೀನೆ

ಶರಣವತ್ಸಲ ಬಹು ಕರುಣೀಯೇ 18


ದಿನ ದಿನ ಮಹಿಮವು

ಘನ ಘನ ತೋರೋದು

ಬಿನಗು ಮಾನವರಿಗೆ ತಿಳಿಯಾದೋ 19


ಕರುಣಾನಿಧಿಯೆ ನೀನು

ಶರಣ ಮಂದಾರನೆ

ಶರಣ ವತ್ಸಲ ನಿನಗೆ ಶರಣೆಂಬೆ 20


ವಸುಧಿತಳದಿ ನೀನೆ

ವಶನಾಗೆ ಜನರಿಗೆ

ವ್ಯಸನಗಳುಂಟೇನೊ ಪೇಳಯ್ಯಾ 21


ದುರಿತ ದುಷ್ಕøತವೆಲ್ಲ

ದೂರದಲೋಡೋವು

ಕರಿಯು ಸಿಂಹನ ಕಂಡತೆರನಂತೆ 22


ನಿನ್ನ ನಾಮದ ಸ್ಮರಣೆ

ಘನ್ನ ರೋಗಗಳನ್ನು

ಚೆನ್ನಾಗಿ ನಾಶನ ಮಾಳ್ಪೋದೋ 23


ರಾಘವೇಂದ್ರ ಗುರು

ಯೋಗಿಕುಲಾಗ್ರಣಿ

ವೇಗಾದಿ ಪೊರೆದೆನ್ನ ಪಾಲಿಪೆ 24

ಜನನಿ ಜನಕರು ತಮ್ಮ

ತನಯರ ಪೊರೆದಂತೆ

ದಿನದಿನ ನೀನೇವೆ ಸಲಹೂವಿ 25


ಅನಿಮಿತ್ತ ಬಾಂಧವ

ಅನುಗಾಲ ನೀನಿರೆ

ಜನರು ಮಾಡುವ ಬಾಧೆÉ ಎನಗೇನೋ 26


ಮನಸಿನೊಳಗೆ ನಿತ್ಯ

ನೆನೆಯುತ ತವ ಪಾದ

ವನಜ ಯುಗಳ ಮೊರೆ ಪೊಂದಿದೆ 27


ನಿನ್ನ ಮಹಿಮ ಶ್ರವಣ

ನಿನ್ನ ಗುಣಕೀರ್ತನ

ನಿನ್ನ ಮೂರ್ತಿಧ್ಯಾನ ನೀಡೈಯ್ಯಾ 28


ನಿನ್ನ ಉಪಾಸನ

ನಿನ್ನ ದಾಸತ್ವವ

ಚನ್ನಾಗಿ ಎನಗಿತ್ತು ಸಲಹೈಯ್ಯಾ 29


ನಿನ್ನನುಳಿದು ಈಗ

ಮನ್ನಿಸಿ ಪೊರೆವಂಥ

ಘನ್ನ ಮಹಿಮರನ್ನ ಕಾಣೆನೋ 30


ದಾತ ಗುರು ಜಗ

ನ್ನಾಥ ವಿಠಲಗತಿ

ಪ್ರೀತಿ ಪಾತ್ರನು ನೀನೆ ನಿಜವಯ್ಯೊ 31

***