Showing posts with label ನಿನ್ನ ಸೇವಿಸೆ ಬಂದೆ ನಾನು ಯನ್ನ ಪೋಷಿಸಬೇಕೋ others brahmanya teertha stutih. Show all posts
Showing posts with label ನಿನ್ನ ಸೇವಿಸೆ ಬಂದೆ ನಾನು ಯನ್ನ ಪೋಷಿಸಬೇಕೋ others brahmanya teertha stutih. Show all posts

Saturday, 1 May 2021

ನಿನ್ನ ಸೇವಿಸೆ ಬಂದೆ ನಾನು ಯನ್ನ ಪೋಷಿಸಬೇಕೋ ankita others brahmanya teertha stutih

 ಶ್ರೀ ಬ್ರಹ್ಮಣ್ಯತೀರ್ಥರ ವೈಭವ by ಶ್ರೀ ಏರಿ ಶೇಷಾಚಾರ್ಯರ ಮಕ್ಕಳಾದ ಶ್ರೀ ಏರಿ ವೆಂಕಟೇಶಾಚಾರ್ಯರು 

ರಾಗ : ಕಾಂಬೋಧಿ ತಾಳ : ಝಂಪೆ 


ನಿನ್ನ ಸೇವಿಸೆ ಬಂದೆ ನಾನು ।

ಯನ್ನ ಪೋಷಿಸಬೇಕೋ 

ಗುರುವರ್ಯ ನೀನು ।। ಪಲ್ಲವಿ ।। 


ಚಂದ್ರಿಕಾಚಾರ್ಯ ಪೂಜಿತನೆ ।

ಚಂದ್ರವಾದನ ಸುಜ್ಞಾನ ಭೂಷಿತನೆ ।

ಇಂದ್ರಾದಿ ವಂದ್ಯ ಪೂಜಿಪನೆ ।

ಇಂದೆನ್ನ ಕಾಯೋ 

ಸತ್ಕರುಣಾಸಾಗರನೆ ।। ಚರಣ ।। 


ಖಾಸ ಕುಷ್ಠ ನೇತ್ರ ರೋಗ ।

ಬ್ಯಾಸರದೆ ಕಳೆದು ಕಾಯ್ದೆ ನೀ ಬೇಗ ।

ವ್ಯಾಸ ಸೇವನ ಲಬ್ದ ಯೋಗ ।

ಶ್ರೀಶನ್ನ ತೋರಿಸೋ 

ಸುಜ್ಞಾನ ಪೂಗ ।। ಚರಣ ।। 


ಏರಿ ಶೇಷಾರ್ಯ ತನುಜರು ।

ತೋರಿದ ಬ್ರಹ್ಮಣ್ಯ 

ಗುರೋ ನಿಮ್ಮ ಚರಣ ।

ವಾರಿಸಿ ಬಹು ತಾಪಗಳನು ।

ಧೀರ ನೆನಿಸಬೇಕೋ 

ಸದ್ಗುರುರನ್ನ ।। ಚರಣ ।। 

****


ಈ ಪದದಲ್ಲಿ " ಇಂದ್ರಾದಿ ವಂದ್ಯ ಪೂಜಿಪನೆ " ಎಂಬ ಪದವನ್ನು ಶ್ರೀ ಏರಿ ಶೇಷಾಚಾರ್ಯರ ಮಕ್ಕಳಾದ ಶ್ರೀ ಏರಿ ವೆಂಕಟೇಶಾಚಾರ್ಯರು ಪ್ರಯೋಗಿಸಿದ್ದಾರೆ. 

ಅದರ ಅರ್ಥ ಹೀಗಿದೆ... 

ಇಂದ್ರಾದಿ ದೇವತೆಗಳಿಂದ ಸುತ್ಯನೂ - ನಮಸ್ಕೃತನೂ ಆದ ಶ್ರೀ ಹರಿಯನ್ನು ಪೂಜಿಪನೆ - 

ಎಂದು ಶ್ರೀ ಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ.