Saturday, 1 May 2021

ನಿನ್ನ ಸೇವಿಸೆ ಬಂದೆ ನಾನು ಯನ್ನ ಪೋಷಿಸಬೇಕೋ ankita others brahmanya teertha stutih

 ಶ್ರೀ ಬ್ರಹ್ಮಣ್ಯತೀರ್ಥರ ವೈಭವ by ಶ್ರೀ ಏರಿ ಶೇಷಾಚಾರ್ಯರ ಮಕ್ಕಳಾದ ಶ್ರೀ ಏರಿ ವೆಂಕಟೇಶಾಚಾರ್ಯರು 

ರಾಗ : ಕಾಂಬೋಧಿ ತಾಳ : ಝಂಪೆ 


ನಿನ್ನ ಸೇವಿಸೆ ಬಂದೆ ನಾನು ।

ಯನ್ನ ಪೋಷಿಸಬೇಕೋ 

ಗುರುವರ್ಯ ನೀನು ।। ಪಲ್ಲವಿ ।। 


ಚಂದ್ರಿಕಾಚಾರ್ಯ ಪೂಜಿತನೆ ।

ಚಂದ್ರವಾದನ ಸುಜ್ಞಾನ ಭೂಷಿತನೆ ।

ಇಂದ್ರಾದಿ ವಂದ್ಯ ಪೂಜಿಪನೆ ।

ಇಂದೆನ್ನ ಕಾಯೋ 

ಸತ್ಕರುಣಾಸಾಗರನೆ ।। ಚರಣ ।। 


ಖಾಸ ಕುಷ್ಠ ನೇತ್ರ ರೋಗ ।

ಬ್ಯಾಸರದೆ ಕಳೆದು ಕಾಯ್ದೆ ನೀ ಬೇಗ ।

ವ್ಯಾಸ ಸೇವನ ಲಬ್ದ ಯೋಗ ।

ಶ್ರೀಶನ್ನ ತೋರಿಸೋ 

ಸುಜ್ಞಾನ ಪೂಗ ।। ಚರಣ ।। 


ಏರಿ ಶೇಷಾರ್ಯ ತನುಜರು ।

ತೋರಿದ ಬ್ರಹ್ಮಣ್ಯ 

ಗುರೋ ನಿಮ್ಮ ಚರಣ ।

ವಾರಿಸಿ ಬಹು ತಾಪಗಳನು ।

ಧೀರ ನೆನಿಸಬೇಕೋ 

ಸದ್ಗುರುರನ್ನ ।। ಚರಣ ।। 

****


ಈ ಪದದಲ್ಲಿ " ಇಂದ್ರಾದಿ ವಂದ್ಯ ಪೂಜಿಪನೆ " ಎಂಬ ಪದವನ್ನು ಶ್ರೀ ಏರಿ ಶೇಷಾಚಾರ್ಯರ ಮಕ್ಕಳಾದ ಶ್ರೀ ಏರಿ ವೆಂಕಟೇಶಾಚಾರ್ಯರು ಪ್ರಯೋಗಿಸಿದ್ದಾರೆ. 

ಅದರ ಅರ್ಥ ಹೀಗಿದೆ... 

ಇಂದ್ರಾದಿ ದೇವತೆಗಳಿಂದ ಸುತ್ಯನೂ - ನಮಸ್ಕೃತನೂ ಆದ ಶ್ರೀ ಹರಿಯನ್ನು ಪೂಜಿಪನೆ - 

ಎಂದು ಶ್ರೀ ಬ್ರಹ್ಮಣ್ಯತೀರ್ಥರನ್ನು ಸ್ತುತಿಸಿದ್ದಾರೆ. 

No comments:

Post a Comment