Showing posts with label ದಾಸರಾಯ ಪೋಷಿನೆನ್ನನ್ನು ಪ್ರಾರ್ಥಿಸುವೆ ಶೇಷ karpara narahari sheshadasa stutih. Show all posts
Showing posts with label ದಾಸರಾಯ ಪೋಷಿನೆನ್ನನ್ನು ಪ್ರಾರ್ಥಿಸುವೆ ಶೇಷ karpara narahari sheshadasa stutih. Show all posts

Saturday 1 May 2021

ದಾಸರಾಯ ಪೋಷಿನೆನ್ನನ್ನು ಪ್ರಾರ್ಥಿಸುವೆ ಶೇಷ ankita karpara narahari sheshadasa stutih

 ಶ್ರೀ ಕಾರ್ಪರ ನರಹರಿ ಆಚಾರ್ಯರ ಕೃತಿ

" ಶ್ರೀ ಶೇಷದಾಸರ ಸ್ತುತಿ "

ರಾಗ : ಶಂಕರಾಭರಣ   ತಾಳ : ರೂಪಕ

ದಾಸರಾಯ ಪೋಷಿನೆನ್ನನ್ನು । 

ಪ್ರಾರ್ಥಿಸುವೆ ।

ಶೇಷದಾಸವರ್ಯ 

ಪೋಷಿಸೆನ್ನನು  ।। ಪಲ್ಲವಿ ।।


ಪೋಷಿಸೆನ್ನ ಮನದಿ ಬಹ ।

ದೋಷಗಳನು ತರಿದು । ಇಂದಿ ।

ರೇಶನಂಘ್ರಿ ಧ್ಯಾನವ ಪ್ರತಿ ।

ವಾಸರದಲಿ ಒದಗುವಂತೆ ।। ಅ. ಪ ।।


ದೇಶ ದೇಶಗಳಲಿ ಭಜಿಪ ।

ದಾಸ ಜನರ ಮನದ । ಅಭಿ ।

ಲಾಷೆಗಳನು ಸಲಿಸುತಲಿ । ಸು ।

ರೇಶನಂತೆ ಮೆರೆದ ಶೇಷ  ।। ಚರಣ ।।


ಮಂದನಾದರೂ ನಿಮ್ಮಯ ಪದ ।

ದ್ವಂದ್ವ ಭಜಿಸೆ ಜಗದಿ । ಪ್ರಾಜ್ಞ ।

ನೆಂದು ಕರೆಸುವೆನು ಯೆನುತ ನಾ ।

ವಂದಿಸುವೆ ಸುಜ್ಞಾನವಿತ್ತು  ।। ಚರಣ ।।


ಕರುಣ ಶರಧೆ ನಿಮ್ಮ ನಾನು ।

ಸ್ಮರಣೆ ಮಾತ್ರದಿ ಭೂತ ಪ್ರೇತ। ಗ ।

ಳಿರದೆ ಪೋಪವು ಶರಣು ಜನರ ।

ದುರಿತ ಘನಕೆ ಮರುತರೆನಿಪ  ।। ಚರಣ ।।


ಈ ಮಹಿಯೊಳಗಾದಿ ಶಿಲೆಯ ।

ಸ್ವಾಮಿಯ ಪದದಿನೆ ತ್ರಿಪಥ ।

ಗಾಮಿನಿಯಳ ತೋರಿ ಸ್ವಜನ ।

ಕಾಮಿತವ ಪೂರೈಸಿದಂತೆ  ।। ಚರಣ ।।


ಶೇರಿದ ಪರಿವಾರಕ್ಕೆ ಸುರ ।

ಭೂರುಹವೆಂದೆನಿಸುವಂಥಾ ।

ಪಾರ ಮಹಿಮ ಕಾರ್ಪರ ಸಿರಿ ।

ನರಸಿಂಹನ ನೊಲಿಸಿದಂಥಾ  ।। ಚರಣ ।।

***

ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ

ದಾಸವರ್ಯ ಪೋಷಿಸೆನ್ನನು ಪ


ಪೋಷಿಸೆನ್ನ ಮನದಿ ಬಹದೋಷಗಳನು

ತರಿದು ಇಂದಿ-

ರೇಶನಂಘ್ರಿಧ್ಯಾನವ ಪ್ರತಿವಾಸರದಲಿ ಒದಗುವಂತೆಅ.ಪ

ದೇಶ ದೇಶಗಳಲಿ ಭಜಿಪ ದಾಸ ಜನರ ಮನದ ಅಭಿ-

ಲಾಷೆಗಳನು ಸಲಿಸುತಲಿ ಸುರೇಶನಂತೆ ಮೆರೆದ ಶೇಷ 1


ಮಂದನಾದರು ನಿಮ್ಮಯ ಪದದ್ವಂದ್ವ

ಭಜಿಸೆ ಜಗದಿ ಪ್ರಾಜ್ಞ-

ನೆಂದು ಕರೆಸುವನು ಯೆನುತ ನಾವಂದಿಸುವೆ

ಸುe್ಞÁನವಿತ್ತು 2


ಕರುಣಶರಥೇ ನಿಮ್ಮ ನಾಮ ಸ್ಮರಣೆ

ಮಾತ್ರದಿ ಭೂತ ಪ್ರೇತಗ-

ಳಿರದೆ ಪೋಪವು ಶರಣು ಜನರ ದುರಿತ

ಘನಕೆ ಮರುತರೆನಿಪ 3


ಈ ಮಹಿಯೊಳಗಾದಿ ಶಿಲೆಯ ಸ್ವಾಮಿಯ

ಪದದಿಂದೆ ತ್ರಿಪಥ

ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ4


ಶೇರಿದ ಪರಿವಾರಕೆ ಸುರ ಭೂರುಹವೆಂದೆನಿಸುವಂಥಾ

ಪಾರ ಮಹಿಮ ' ಕಾರ್ಪರ ಸಿರಿನಾರಸಿಂಹ'ನ

ನೊಲಿಸಿದಂಥ 5

****