Showing posts with label ನಂದತನಯ ಗೋವಿಂದನ ಭಜಿಪುದು purandara vittala NANDA TANAYA GOVINDANA BHAJIPUDU. Show all posts
Showing posts with label ನಂದತನಯ ಗೋವಿಂದನ ಭಜಿಪುದು purandara vittala NANDA TANAYA GOVINDANA BHAJIPUDU. Show all posts

Wednesday, 15 December 2021

ನಂದತನಯ ಗೋವಿಂದನ ಭಜಿಪುದು purandara vittala NANDA TANAYA GOVINDANA BHAJIPUDU

ರಾಗ : ಅಭೇರಿ ತಾಳ- ಆದಿತಾಳ

ನಂದ ತನಯ ಗೋವಿಂದನ 
ಭಜಿಪುದು ಆನಂದವಾದ ಮಿಠಾಯಿ   ||ಪ||

ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ      ||ಅ.ಪ||

ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ
ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ    ||೧||

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ       ||೨||

ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ      ||೩||
****

ರಾಗ : ಕೇದಾರ ಗೊವ್ಳ  ತಾಳ : ಆದಿ (raga, taala may differ in audio)

pallavi

nanda tanaya gOvindana bhajiyudu AnandavAda miTTAyi

anupallavi

bandhagaLanu bhava rOgagaLellanu ninddipadI miTTAyi

caraNam 1

dadhi krta kSIrakkintalu idu bahu adhikavAda miTTAyi
kadaLi drAkSe garjUra rasagaLanu mIruvudI miTTAyi

caraNam 2

panca bhakSyangaLa SaD rasAnnagaLa mincidantha miTTAyi
kancIshane rakSisu endusiruva ranjike biDipa miTTayi

caraNam 3

japa tapa sAdhanangaLigindalu bahu aparUpada mittAyi
jipuNa matigaLige sAdhyavallatiha purandara viTTala miTTAyi
***

ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ   ||ಪ||

ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ      ||ಅ.ಪ||

ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ
ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ    ||೧||

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸಿರುವರ ಅಂಜಿಕೆ ಬಿಡಿಪ ಮಿಠಾಯಿ       ||೨||

ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ      ||೩||
***

ರಾಗ ಖಮಾಸ್ ಅಟತಾಳ / ರಾಗ ಬಾಗೇಶ್ರೀ ಖಂಡಛಾಪು ತಾಳ (raga tala may differ in audio)

Nanda tanaya govindana Bajipudu anandavada mithayi ||pa||

Bandhagalanu Bava rogagalellanu nindipudu I mithayi ||a.pa||

Dadhi gruta kshirangaligimtalu bahu adhikavada mithayi
Kadali drakshi karjura rasagalanu miruvudu I mithayi ||1||

Pancha bakshyamgala shadrasannagala mimcidantha mithayi
Kancisane rakshisu emdusiruvara anjike bidipa mithayi ||2||

Japa tapa sadhanagaligimtalu bahu aparupada mithayi
Jipuna matigalige sadhyavalladiha purandara vithala mithayi ||3||
***

ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ||
ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ ||

ದಧಿ ಘೃತ ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ
ಕದಳಿ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದೀ ಮಿಠಾಯಿ ||

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸಿರುವರಂಜಿಕೆ ಬಿಡಿಪ ಮಿಠಾಯಿ ||

ಜಪ ತಪ ಸಾಧನಗಳಿಗಿಂತಲು ಬಹು ಅಪರೂಪದ ಮಿಠಾಯಿ
ಜಿಪುಣಮತಿಗಳಿಗೆ ಸಾಧ್ಯವಿಲ್ಲದಿಹ ಪುರಂದರವಿಠಲ ಮಿಠಾಯಿ ||
***