Showing posts with label ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ vasudeva vittala. Show all posts
Showing posts with label ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ vasudeva vittala. Show all posts

Wednesday, 1 September 2021

ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಸಣ್ಣವನ ಬಿನ್ನಪವ ಸಲಿಸಬಹುದಯ್ಯ

ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ಪ


ನಿನ್ನ ಗುಣ ಸುರ ತರುವು ವನದಿ ಶುಕಾದಿಗ

ಳುನ್ನತವಾಗಿಹವು ಉಚಿತವೇ ಸರಿಯು

ಎನ್ನ ಮನ ಕೋಡಗವು ಅಡವಿಯನು ಬಿದ್ದದೆ ಇ

ದನ್ನ ಅದರೊಳಗೆ ಇಡಬಹುದಯ್ಯ ಹರಿಯೆ 1


ಕಮಲಭವ ವಾಣಿ ಮುಖ ನಯನಗಳು ಎಂಬ ಮಹ

ಕಮಲೋತ್ಪಲಗಳಿಂದ ಶೋಭಿಸುತಿಹ

ವಿಮಲ ಲಾವಣ್ಯ ಸುಧಾಂಬುಧಿಯೊಳಿಡಿಸಯ್ಯ

ಮಮ ನೇತ್ರ ಮೀನಗಳ ವಿಷಯ ಪಂಕದಿ ತೆಗಿಸು 2


ನಿಮ್ಮ ನಾಮಾಮೃತದ ಸೂರೆಯನು ಬಿಟ್ಟು ಶ್ರೀ

ಬೊಮ್ಮ ಭವ ಮುಖರ ಕೆರೆ ಕೋಡೇರಿಸುವಿ

ಇಮ್ಮನುಜ ತುತಿ ಚೂರ್ಣ ತೆಗೆದು ತೊಳೆದು ತುಂಬೊ

ನಮ್ಮ ವದನ ಕರಡಗೆಯ ವಾಸುದೇವವಿಠಲ 3

***