Showing posts with label ಮಂಗಳಮುದ್ದು ಕೃಷ್ಣನಿಗೆ ಜಯ ಮಂಗಳ ಮದನ ಜನಕ ಬಾಲ ಹರಿಗೆ gopalakrishna vittala. Show all posts
Showing posts with label ಮಂಗಳಮುದ್ದು ಕೃಷ್ಣನಿಗೆ ಜಯ ಮಂಗಳ ಮದನ ಜನಕ ಬಾಲ ಹರಿಗೆ gopalakrishna vittala. Show all posts

Monday, 2 August 2021

ಮಂಗಳಮುದ್ದು ಕೃಷ್ಣನಿಗೆ ಜಯ ಮಂಗಳ ಮದನ ಜನಕ ಬಾಲ ಹರಿಗೆ ankita gopalakrishna vittala

ಮಂಗಳ ಮುದ್ದು ಕೃಷ್ಣನಿಗೆ ಜಯ

ಮಂಗಳ ಮದನ ಜನಕ ಬಾಲ ಹರಿಗೆ ಪ.

ಕಡಗೋಲ ನೇಣು ಪಿಡಿದಗೆ ಪಾಲ್

ಗಡಿಗೆ ಒಡೆದು ಇಲ್ಲಿ ಓಡಿ ಬಂದವಗೆ

ಕಡಲ ತಡಿಯಲಿ ನಿಂತವಗೆ ಅಷ್ಟ

ಮಡದಿಯರರಸನೆಂತೆಂಬ ಪುರುಷಗೆ 1

ಯತಿವರರಿಂದರ್ಚಿತಗೆ ಬಹು

ಜತನದಿ ಭಕ್ತವರ್ಗಗಳ ಕಾಯ್ವನಿಗೆ

ಯತಿ ಮಧ್ವರಾಯಗೊಲಿದಗೆ ನಿತ್ಯ

ಚ್ಯುತ ದೂರವಾದ ಸರ್ವೇಶನೆಂಬುವಗೆ 2

ಗರುಡನ್ನ ಎಡದಿ ನಿಲಿಸಿದಗೆ ಬಲದಿ

ಮರುತನ್ನ ನಿಲಿಸಿ ಕೊಂಡ್ಹರುಷಪಡುವನಿಗೆ

ಕಿರಿದ್ವಾರದಿ ಮಧ್ವ ಉಳ್ಳವಗೆ ನಮ್ಮ

ಸಿರಿಪತಿ ಗೋಪಾಲಕೃಷ್ಣವಿಠ್ಠಲಗೆ 3

****