Showing posts with label ಶ್ರೀವನಿತೆಯರಸಾ vijaya vittala ankita suladi ಗುಣ ತಾರತಮ್ಯ ಸುಳಾದಿ SRIVANITEYARASA GUNA TARATAMYA SANDHI. Show all posts
Showing posts with label ಶ್ರೀವನಿತೆಯರಸಾ vijaya vittala ankita suladi ಗುಣ ತಾರತಮ್ಯ ಸುಳಾದಿ SRIVANITEYARASA GUNA TARATAMYA SANDHI. Show all posts

Thursday, 3 June 2021

ಶ್ರೀವನಿತೆಯರಸಾ vijaya vittala ankita suladi ಗುಣ ತಾರತಮ್ಯ ಸುಳಾದಿ SRIVANITEYARASA GUNA TARATAMYA SANDHI

 Audio by Vidwan Sumukh Moudgalya

 

ಶ್ರೀ ವಿಜಯದಾಸಾರ್ಯ ವಿರಚಿತ  ಗುಣ ತಾರತಮ್ಯ ಸುಳಾದಿ 


 ರಾಗ : ಮೋಹನ 


 ಧ್ರುವತಾಳ 


ಶ್ರೀವನಿತೆಯರಸಾ ಶೃಂಗಾರ ಗುಣನಿಧಿ

ಪಾವನ್ನ ಮೂರುತಿ ಪರಮ ಪುರುಷಾ

ಭಾವುಕ ಚರಿತಾ ಭವ ಭಯ ವಿದೂರ

ಕೋವಿದಾ ಜಗದಂತರ್ಯಾಮೀ ಸ್ವಾಮಿ

ದೇವ ದೇವೇಶಾ ಆತುಮಾ ಅಂತರಾತುಮಾ

ತ್ರಿವಿಧ ಜೀವಿಗಳ ನಿರ್ಮಾಣನೇ

ಕೈವಲ್ಯನಾಥಾ ಅತ್ಯಣು ಮಹಾ ಮಹತ್ತು

ಠಾವಿನಲ್ಲಿ ಪೂರ್ಣಗುಪ್ತ ವ್ಯಾಪ್ತಾ

ಕಾವ ಮುಕ್ತಾ ಮುಕ್ತರ ಇಚ್ಛಾಮಾತುರದಿಂದ

ಯಾವತ್ತು ಕಾರಣ ಆದಿ ಪೊರ ಬೊಮ್ಮ

ಆವಾವ ಕಲ್ಪದಲ್ಲಿ ಶಶ್ವದೇಕಪ್ರಕಾರ ಸ್ವಾ-

ಭಾವಿತ ಪ್ರವರ್ತ ಲೀಲಾ ವಿನೋದ

ಕಾವಳವಾದಾ ದುರ್ಘಟ ಭವಾಟವ್ಯಕೆ

ಪಾವಕನೆನಿಸುವ ಪರದೇವತಿ

ಸೇವಿಸುವ ಭಕ್ತರ ಕುಲಕೊಜ್ರಪಂಜರ

ಜೀವಾದಿಗಳ ಭಿನ್ನ ಜನಾರ್ದನಾ

ಸ್ಥಾವರ ಜಂಗಮ ಸಿರಿ ಪರಿಯಂತ ಗು-

ಣಾವಳಿ ಆಧಿಕರನ್ನೆ ಮಾಡಿ

ಪೂವಿಲ್ಲನಯ್ಯ ವಿಜಯವಿಠ್ಠಲ ತಾರತಮ್ಯ

ಭಾವದಲ್ಲಿ ನಡಿಪಾ ಭಾಸ್ಕರಾನಂತ ತೇಜಾ ॥೧॥


 ಮಟ್ಟತಾಳ 


ಹರಿಗೆ ಸಿರಿದೇವಿ ಅನಂತ ಗುಣಕೆ ನೀಚಳು

ಸಿರಿಗೆ ಪರಮೇಷ್ಟಿ ಕೋಟಿ ಗುಣಕೆ ಅ-

ವರ ಕಾಣೋ ವಾಯು ಸರಸಿಜಭವ ಸಮಾ

ಸರಸ್ವತೀ ಭಾರತೀ ತಮ್ಮ ತಮ್ಮ ಪತಿಗಳಿಂದ

ನಿರುತದಲಿ ತಾವು ನೂರು ಗುಣಾಧಮರು

ಗರುಡ ಶೇಷ ರುದ್ರ ಮೂವರೊಂದೆ ಸಮಾ

ಸರಸ್ವತಿಯರಿಗಿಂತ ಹತ್ತತ್ತು ಗುಣ ನೀಚಾ

ಗಿರಿಜ ವಾರುಣಿಯರು ತಮ್ಮ ಪತಿಗಳಿಂದ

ಎರಡೈದು ಗುಣದಿಂದಧಮರು

ವರಜಾಂಬುವತಿ ನೀಲಾ ಕಾಳಿಂದಿ ಸುಂ-

ದರ ಮಿತ್ರವಿಂದಾ ಲಕ್ಷಣ ಭದ್ರಾ ಇ-

ವರು ಆರು ಜನರು ಹರಿಯ ರಾಣಿಯರು

ಗರುಡಶೇಷ ರುದ್ರ ಇವರಿವರ ಸತಿ

ಯರ ಮಧ್ಯದಲಿ ಇರುತಿಪ್ಪರು ಇವರು

ಸಿರಿಯಾವೇಶವು ಇಲ್ಲದ ಸಮಯದಲ್ಲಿ ಅ-

ವರ ಪ್ರದ್ಯುಮ್ನಗೆ ವಿಂಶತಿಗುಣ ಅಧಿಕರು ಎನಿಸುವರು

ಗರುಡಾದ್ಯರ ನೋಡೆ ಪಂಚಗುಣಕ್ಕೆ ಹೀನಾ

ಸಿರಿಯಾವೇಶವದು ಬಂದು ಪ್ರಾಪುತವಾಗೆ

ಸರಿಯೆಂದೆನಿಸುವರು ಬಲರಾಮನ ಗುಣಕೆ

ಕರಡಿಸುತೆಯಲ್ಲಿ ಸದಾ ಸಿರಿಯಾವೇಶಾ

ಇರಲಾಗಿ ಐವರಿಗೆ ಕಿಂಚಿತು ಅಧಿಕಳು

ಅರಿವುದು ಈ ಪರಿ ವಿಜಯವಿಠ್ಠಲ ಗೆಲ್ಲ

ಪರಮ ಪ್ರೀಯರು ತಮ್ಮ ಯೋಗ್ಯತಾನುಸಾರ ॥೨॥


 ರೂಪಕತಾಳ 


ಇಂದ್ರನ್ನ ನೋಡಲು ಕಾಮ ಕಿಂಚಿತು ನೀಚಾ

ಇಂದ್ರ ಕಾಮರು ವಾರುಣಿಯರಿಗಿಂತ ಒಂಭತ್ತು

ಒಂದು ಗುಣಕೆ ನೀಚರಾಗಿ ಒಪ್ಪುತಲಿಹರು

ಮುಂದೆ ಅಹಂಕಾರ ಪ್ರಾಣನು ಸುರ ಪತಿ ಕಾಮ-

ರಿಂದ ಹತ್ತುಗುಣ ಅನಧಿಕನು

ಇಂದ್ರಾಣಿ ಅನಿರುದ್ಧ ಸ್ವಾಯಂಭುವ ಮನು ದಕ್ಷ

ವೃಂದಾರಕ ಗುರು ರತಿ ಇವರಾರು ಜನ ಸಮ

ರೆಂದು ತಿಳಿವುದು ಅಹಂಕಾರ ಪ್ರಾಣನ ದೆಶೆ-

ಯಿಂದ ಈರೈದು ಗುಣದಿಂದ ಊನರು ಕಾಣೋ

ಛಂದದಲಿ ಪ್ರವಹ ಮರುತಾನಿರುದ್ಧಾದಿಗ-

ಳಿಂದ ವಿಚಾರಿಸೆ ಐದು ಗುಣಾಧಮನು

ಸಂದೇಹವಿನ್ನಿಲ್ಲಾ ಯಮಧರ್ಮ ಅಜನ

ನಂದನೆ ಶತರೂಪ ಚಂದ್ರಸೂರ್ಯರಿವರು ಕ್ರಮ-

ದಿಂದ ಅಲ್ಪರ್ಧದ ಗುಣದಲಿ ನೀಚರು

ಹಿಂದೆ ಪೇಳಿದಾ ಮರುತ ಪ್ರವಹನಿಗಿಂತಲಿ

ಒಂದೊಂದು ಗುಣಗಳಿಗೆ ಕಡಿಮೆ ಇವರು ಎನ್ನಿ

ಮಂದಾಕಿನೀ ರಮಣಾ ಒಬ್ಬನೇ ಧರ್ಮಾದ್ಯಾ-

ರಿಂದ ಪಾದ ಪಾದಾರ್ಧ ಗುಣಕೆ ನೀಚಾ

ಒಂದೇ ಪರದೈವ ವಿಜಯವಿಠ್ಠಲ ರೇಯಾ

ಪೊಂದಿಸಿದಂತೆ ಪ್ರವರ್ತಿಸುವರು ॥೩॥


 ಝಂಪಿತಾಳ 


ತ್ರಿದಶಮುನಿ ನಾರದನು ವರುಣ ದೇವರಕಿಂತ

ಪಾದಾರ್ಧ ಗುಣ ನೀಚನು ಕಲಹಪ್ರೀಯಾ

ತದನಂತರದಲ್ಲಿ ಭೃಗು ಅನಲ ಪ್ರಸೂತಿ ನಾ-

ರದ ಕಿಂತ ನೀಚತನವೆಂಬೋರಯ್ಯಾ

ವಿಧಿಸುತರು ಏಳುಜನ ಕೌಶಿಕ ವೈವಸ್ವತಾ

ಅಧಮರು ಎಳ್ಳನಿತು ಭೃಗ್ವಾದಿಗೆ

ಇದೆ ಸತ್ಯ ಮಿತ್ರ ತಾರಾ ಮನುಜವಾಹನ

ಸುದತಿ ಪ್ರಾವಹಿ ವೊಂದೇ ಸಮರು

ವಿಧಿಜಾದ್ಯರ ನೋಡೆ ಗುಣ ಎರಡಕ್ಕಧಮರು

ಮುದದಿ ವಿಷ್ವಕ್ಸೇನ ಗಣಪತಿ ವಿತ್ತಪಾ

ತ್ರಿದಶ ವೈದ್ಯರು ಈರ್ವರಶ್ವಿನಿಯರು ಸಹಾ

ಅಧಮರೈವರು ಕಾಣೋ ಮಿತ್ರಾದ್ಯರಿಗೆ ಸ್ವಲ್ಪ

ಇದೆ ತಾರತಮ್ಯವೆಂದರಿವುದೆಲ್ಲಾ

ಮದನನ್ನ ಪೆತ್ತ ಸಿರಿ ವಿಜಯವಿಠ್ಠಲ ಹರಿಯಾ

ಪದಗಳನು ಧ್ಯಾನಿಸುವ ಸದಮಲರಿವರು ನಿತ್ಯಾ ॥೪॥


 ತ್ರಿವಿಡಿತಾಳ 


ವಸುಗಳೇಳು ಮಂದಿ ದಶ ರುದ್ರರು ಮತ್ತೆ

ಬಿಸಿಜಾಪ್ತರಾರು ಜನ ದಶ ವಿಶ್ವೆದೇವರು

ಶ್ವಸನ ಗಣದಲಿ ಎಣಿಸು ನಾಲ್ವತ್ತೆರೆಡರನ್ನಾ

ಎಸೆವ ಋಭು ಗಣದೊಳಗೊಬ್ಬಾ ದ್ಯಾವಾ

ರಸ ಪಿತೃಗಳು ಮೂವರು ಹಸನಾಗಿ ತಿಳಿವದು

ಮಿಸುಕಾದೆಣಿಸುವುದು ಇವರನೆಲ್ಲಾ ಕೂಡಿಸಿ

ಉಸುರುವೆ ಇವರ ಕೂಟದವರ ಕೆಲಬರನ್ನಾ

ಶ್ವಸನರೊಳೈವರು ಸ್ವಲ್ಪರಿವರಧಿಕ

ಕುಶಲದಲೆಣಿಸಿ ಎಂಭತ್ತು ಆರುಜನಾ

ವಸುಗಳಿಂದಲ್ಲಿಗೆ ಪ್ರಾಂತ ತಿಳಿವುದು

ಬೆಸಸುವೆ ಇಂದ್ರ ವಿವಸ್ವಾನ್ ಮಿತ್ರಾ ವರುಣಾ

ವಸುಗಳೊಳು ಅಗ್ನಿ ರುದ್ರರೊಳು ಸದಾಶಿವಾ

ಶ್ವಸನರೊಳೀರ್ವರು ಯಿಲ್ಲಿ ಲೆಖ್ಖಗು-

ಣಿಸು ತೊಂಭತ್ತು ನಾಲ್ಕು ಜನಗಳು

ಪುಸಿಯಲ್ಲ ಮೊದಲೆ ಪೇಳಿದವರನ್ನಾ

ವಿಸ್ತರಿಸುವೆ ಗಣಪಾದ್ಯರು ಐವರು

ಬಿಸಿಜ ಸಖರ ಕೂಟ ಪರ್ಜನ್ಯನೊಬ್ಬಾ

ಎಣಿಸಲಾಗಾ ಶತಸ್ಥರಿವರು ಎನ್ನಿ

ಪೆಸರಾದ ಇವರೊಳು ಪ್ರಾಣಾದಿಗಳಿಗೆ ಅಗ್ನಿ ತ್ರಿ-

ದಶ ನವಕೋಟಿಯರು ಸಮನೆನ್ನಿರೋ

ಹಸನಾಗಿ ಇವರೊಳು ಉತ್ತಮರನ ಬಿಟ್ಟು

ದಶಸ್ಥಾನ ಇನಗಿಂತ ಸ್ವಲ್ಪು ನೀಚಾ 

ವಸುಧಿಪಾಲಕ ನಮ್ಮ ವಿಜಯವಿಠ್ಠಲ ಹರಿಯ 

ಪೆಸರು ಕೊಂಡಾಡುವರು ತಮ್ಮ ಯೋಗ್ಯತದನಿತು ॥೫॥


 ಧೃವತಾಳ 


ಮತ್ತೆ ಕರ್ಮ ದೇವತೆ ಪಾವಕ ಪ್ರಹ್ಲಾದ 

ದೈತ್ಯನಾದರು ಬಲು ಹರಿಭಕುತನು 

ಸಪ್ತ ಪಿತೃಗಳು ಗಂಧರ್ವರೆಂಟು ಮಂದಿ

ಉತ್ತಮ ಚವನ ಉಚಿಥ್ಯ ಮನುಗಳು ಹನ್ನೊಂದು 

ಸಪ್ತ ಇಂದ್ರರು ಚಕ್ರವರ್ತಿಗಳನು ನೋಡಿ

ತುತ್ತಿಸಿ ಶತ ಪುಣ್ಯಶ್ಲೋಕರೆಂಬುವರು 

ಕಾರ್ತಿವೀರ್ಯಾರ್ಜುನ ಮಾಂಧಾತ ಶಶಿಬಿಂದು 

ಅತ್ಯಂತ ಶೂರ ಭರತ ಪರೀಕ್ಷೀತ

ಸತ್ಯದ ಬಲಿ ವಕ್ರವರ್ತಿ ಕಾಕುಸ್ಥ ಗಯಾ

ಅರ್ಥಿಯಲ್ಲಿಪ್ಪ ಪ್ರಿಯವ್ರತ ಪೃಥು ನೃಪನು 

ಚಿತ್ತ ನಿರ್ಮಳ ಭೂಪೋತ್ತಮರು ಕರ್ಮಜ ದೇ-

ವತಿಗಳೆಲ್ಲ ಸರಿ ಇನಿತು ಜನಂಗಳು ಮ-

ರುತ್ತೈವರಿಗೆ ಕಡಿಮೆ 

ಸತ್ಯ ಸಂಕಲ್ಪ ನಮ್ಮ ವಿಜಯವಿಠ್ಠಲ ರೇಯಾ

ಮಿತ್ರನಾಗಿ ಪೊರೆಯುತಿಪ್ಪ ಅನುಗಾಲ ॥೬॥


 ಝಂಪೆತಾಳ 


ಶತಸ್ಥೊರಳಗಿಪ್ಪ ಪರ್ಜನ್ಯ ಸೂರ್ಯನು 

ಶಿತನದಿ ಚಂದ್ರನ್ನ ಮಡದಿ ರೋಹಿಣಿ ಮನು-

ಮಥನ ಸುತನಂಗನೆ ವಿರಾಟ ಶಾಮಲೆ 

ಹಿತವಾದ ಸಂಜ್ಞಾದೇವಿ ಇವರಾರು ಜನಾ-

ಸತತ ಸಮಾನರು ಮಿತ್ರಗಿಂತ ದ್ವಿಗುಣ ನೀಚಾ 

ಚತುರರು ತಿಳಿವದು ಇದರೊಳಗೆ ಕೆಲವು 

ದೇವತಿಗಳು ಪರ್ಜನ್ಯಗಿಂತ ಸ್ವಲ್ಪಾಧಮರು 

ಹುತಾಶನನ ಮಡದಿ ಸ್ವಾಹಾ ದೇವಿ ಇವರಿಂದ 

ಅತಿಶಯದಿ ನೋಡಿದಕೆ ಸ್ವಲ್ಪ ನೀಚಳೂ ಕಾಣೋ

ಗತಿ ತಪ್ಪದಂತೆ ಬುಧನು ಸ್ವಾಹಾ ದೇವಿಗೆ 

ಶತ ಗುಣದಲಿ ಕಡಿಮೆ ಎನಿಸಿಕೊಂಬನು

ರತಿ ಪತಿ ಪಿತ ನಮ್ಮ ವಿಜಯವಿಠ್ಠಲ ಹರಿಯಾ

ತುತಿಸಿ ಸರ್ವದಲ್ಲಿ ಅಮೃತವನ್ನೇ ವಯಸೋರು ॥೭॥


 ರೂಪಕತಾಳ 


ಸುರರ ವೈದ್ಯರ ಮಡದಿ ಮರಳಿ ಕಡಿಮೆ ಕ್ಷಪಾ

ಕರಜಗಿಂದಲಿ ಸ್ವಲ್ಪ ಮರಿಯಾದೆ ಇಪ್ಪದು 

ಭರದಿಂದ ಎಣಿಸು ಪುಷ್ಕರ ಶನೈಸ್ಚರಗಳು

ವರ ಉಷಾ ದೇವಿಗೆ ಎರಡೈದು ಗುಣ ಕಡಿಮೆ 

ವರ ಕಶ್ಯಪನ ಸುತ ಧರ ಕಿಶೋರರುಗಳು 

ಇರುತಿಪ್ಪರು ಶನೈಶ್ಚರಗೆ ಕಡಿಮೆ ಎನಿಸಿ

ಎರಡೈವತ್ತು ಗಂಧರ್ವರು ಊರ್ವಶಿ ಮೇನಕೆ-

ಯರು ರಂಭೆ ಘೃತಾಚಿ ತಿಲೋತ್ತಮೆಯು

ಅಪ್ಸರ ಸ್ತ್ರೀಯರುಗಳು ವೈಶ್ವಾನರನ ಮಕ್ಕಳು ಸಾ-

ಸಿರ ಷೋಡಶ ಮಂದಿ ತರುವಾಯ ಎಂಭತ್ತು 

ಪರಮ ಋಷಿಗಳು ಸುರರ ಬಡಿಗ್ಯಾ ಭುಕು

ವರನು ಜಯಂತನು ಸರಿಯಾಗಿಪ್ಪರು 

ಮರೀಚಿ ನಂದನಾನಧಿಕ 

ಪರಮಪುರುಷ ರಂಗಾ ವಿಜಯವಿಠ್ಠಲನು ಈ

ಪರಿಯಿಂ ನಡೆಸುವ ಅವರವರ ಅರಿತು ॥೮॥


 ಮಟ್ಟತಾಳ 


ಮುನಿ ಪತ್ನೇರು ತ್ರಿಜಟೆ ವನಿತೆ ಅಜಾನಜರ

ಎಣಿಸಿ ವೋಜಸರು ಮಾತನುವಾಗಿ ತಿಳಿವದು 

ಗುಣಿಸಿ ಇವರು ಕಿಶೋರನ ನೋಡಲಾಗಿ ಒಂದು 

ಗುಣಕೆ ಕಡಿಮೆ ಕರ್ಮಪ ಅನಿಮಿಷರನ ನೋಡೆ

ಗುಣ ನೂರು ಕಡೆಮೆ ಗಣನೆ ಮಾಡುವದು 

ಮಿನಗುವಾಪ್ಸರ ಸ್ತ್ರೀಯರು ಅಜಾನಜರಿಗೆ ಸಮ-

ವೆನಿಸಿ ಕೊಂಡು ಮೆರೆದು ಅನುನಯದಿಂದಿಪ್ಪರು 

ವನಜನಾಭನೆ ಸಿರಿ ವಿಜಯವಿಠ್ಠಲ ತನ್ನ 

ಮನದಿಚ್ಛೆಯಲಿ ಆಟವನು ಆಡುತಿಪ್ಪ ॥೯॥


 ಅಟ್ಟತಾಳ 


ಎರಗಿ ಪೇಳುವೆನು ಚಿರಾಖ್ಯನಾಮ ಪಿ-

ತರುಗಳು ಅಪ್ಸರ ಸ್ತ್ರೀಯರಿಂದಲಿ ನೋಡೆ

ಎರಡು ಗುಣಕೆ ನೀಚರು ಎನಿಸುವರು 

ಎರಡೈವತ್ತು ಕೋಟಿ ಋಷಿಗಳು ಪಿ-

ತರ ದೆಶೆಯಿಂದ ಶತಗುಣ ಊನ್ಯರು

ಸುರ ಗಂಧರ್ವರೊಳು ನೂರೆಂಟು ಮಂದಿಯ

ಅರಿದು ಮಿಕ್ಕವರನ್ನ ಋಷಿಗಳು ನೋಡಲಾಗಿ 

ಸ್ಥಿರವೆನ್ನಿ ನೂರು ಗುಣಕೆ ನೀಚರೆಂದು ಪೇಳಿ 

ಕರಿ ಭಯ ಹರ ನಮ್ಮ  ವಿಜಯವಿಠ್ಠಲ್ಲಾ ಎ-

ಲ್ಲರಿಗೆ ದೊರೆಯಾಗಿ ಮೆರೆವುತಲಿಪ್ಪ ॥೧೦॥


 ಆದಿತಾಳ 


ಮನುಜ ಗಂಧರ್ವರು ಅವರಿಂದೆಣಿಸೆ ನೂರು

ಗುಣಕೆ ಅಧಮರಾಗಿ ರಂಜಿಸುತ್ತಿಪ್ಪರು 

ಕನಲದೆ ರಾಯರ ಅವರಂತೆ ತಿಳಿದು ಮಾ-

ತನು ಪೇಳೆ ನೃಪರೆ ನೋಡೆ ಮನುಜೋತ್ತಮರನ್ನ

ಅನುಮಾನ ಮಾಡದೆ ನೃಪರ ದೆಶೆಯಿಂದ 

ಗುಣ ನೂರು ಕಡೆಮೆ ಆ ತರುವಾಯದಲ್ಲಿ ಉಂಟು

ಘನ ಜಂಗಮ ಸ್ಥಾವರ ಗಣವೆ ಮೊದಲು ಮಾಡಿ 

ಗಣಿತ ಮಾಡಲು ಮನುಜೋತ್ತಮರು ಸರ್ವಾಧಿಕರು 

ಇನಿತು ತಾರತಮ್ಯ ತೃಣ ಜೀವ ಪರಿಯಂತ 

ಮನದೊಳು ತಿಳಿ ಮುಕ್ತಿ ಯೋಗ್ಯರಾನಂದವ

ಮನೆಮನೆ ದೈವ ವಿಜಯವಿಜಠ್ಠಲ  ತನ್ನಾ

ನೆನೆವೆ ಪಾಲಿಸಿ ಹೃಧ್ವನಜದೊಳಗೆ ಪೊಳೆವಾ ॥೧೧॥



 ಜತೆ


ಗುಣ ತಾರತಮ್ಯವ ತಿಳಿವದು ಚನ್ನಾಗಿ

ಗುಣವಂತ ವಿಜಯವಿಠ್ಠಲ ವ್ಯಕ್ತನಾಗುವ ॥೧೨॥

****