ರಾಗ ಭೀಂಪಲಾಸ್ / ಅಭೇರಿ
ನಾರಾಯಣ ಎನ್ನಿರೋ ನಾರಾಯಣ ಎನ್ನಿ
ನಾರದಪ್ರಿಯನಿಗೆ ನಂದನ ಸುತ ಮುಕುಂದ ಮುರಾರಿಗೆ ಪ
ಕೆಟ್ಟ ಅಜಮಿಳನ ಬಂದು ಕ(ಟ್ಟಲ್ಯ)ಮ ಪಾಶದಿ ತಾ ಕಂ-
ಗೆಟ್ಟು ಹರಿನಾಮವ ಕರೆಯೆ ಕೊಟ್ಟ ತನ್ನ ಪಟ್ಟಣ ಪದವಿ 1
ಕಾಲಕಾಲಕೆ ಗೋಪಾಲನ ನೆನೆಯದೆ ಬಿಟ್ಟು
ಕಾಲಕಳೆಯಲು ಯಮಭಟರು ಕರೆದÀು ಬಾಧಿಸದೆ ಬಿಡರು 2
ಸ್ನಾನ ಜಪ ತಪವ್ಯಾಕೆ ಮೌನ ಮಂತ್ರವ ಬಿಟ್ಟು
ದಾನವಾಂತಕ ಕೃಷ್ಣನ್ನ ಧ್ಯಾನದೊಳಿಟ್ಟರಗಳಿಗೆ 3
ಲೆಕ್ಕವಿಲ್ಲದ ದೇಶ ತುಕ್ಕಿ ತಿರುಗಿದರಿಂದೆ
ದುಃಖವಲ್ಲದೆ ಜÁ್ಞನ ಮುಕ್ತಿ ದೊರಕುವುದೇನು 4
ಬಿಟ್ಟು ವಿಷಯವ ಭೀಮೇಶಕೃಷ್ಣನಲ್ಲಿಟ್ಟು ಧ್ಯಾನ
ಹತ್ತು ಹರಿಪುರ ಸೋಪಾನ ರಕ್ಷಿಸುವ ಖಗವಾಹನ 5
***