Wednesday, 3 November 2021

ನಾರಾಯಣ ಎನ್ನಿರೋ ನಾರಾಯಣ ಎನ್ನಿ ನಾರದಪ್ರಿಯನಿಗೆ ankita bheemesha krishna NARAYANA ENNIRO NARAYANA ENNI NAARADA PRIYANIGE

ರಾಗ ಭೀಂಪಲಾಸ್ / ಅಭೇರಿ 


ನಾರಾಯಣ ಎನ್ನಿರೋ ನಾರಾಯಣ ಎನ್ನಿ

ನಾರದಪ್ರಿಯನಿಗೆ ನಂದನ ಸುತ ಮುಕುಂದ ಮುರಾರಿಗೆ ಪ


ಕೆಟ್ಟ ಅಜಮಿಳನ ಬಂದು ಕ(ಟ್ಟಲ್ಯ)ಮ ಪಾಶದಿ ತಾ ಕಂ-

ಗೆಟ್ಟು ಹರಿನಾಮವ ಕರೆಯೆ ಕೊಟ್ಟ ತನ್ನ ಪಟ್ಟಣ ಪದವಿ 1


ಕಾಲಕಾಲಕೆ ಗೋಪಾಲನ ನೆನೆಯದೆ ಬಿಟ್ಟು

ಕಾಲಕಳೆಯಲು ಯಮಭಟರು ಕರೆದÀು ಬಾಧಿಸದೆ ಬಿಡರು 2


ಸ್ನಾನ ಜಪ ತಪವ್ಯಾಕೆ ಮೌನ ಮಂತ್ರವ ಬಿಟ್ಟು

ದಾನವಾಂತಕ ಕೃಷ್ಣನ್ನ ಧ್ಯಾನದೊಳಿಟ್ಟರಗಳಿಗೆ 3


ಲೆಕ್ಕವಿಲ್ಲದ ದೇಶ ತುಕ್ಕಿ ತಿರುಗಿದರಿಂದೆ

ದುಃಖವಲ್ಲದೆ ಜÁ್ಞನ ಮುಕ್ತಿ ದೊರಕುವುದೇನು 4


ಬಿಟ್ಟು ವಿಷಯವ ಭೀಮೇಶಕೃಷ್ಣನಲ್ಲಿಟ್ಟು ಧ್ಯಾನ

ಹತ್ತು ಹರಿಪುರ ಸೋಪಾನ ರಕ್ಷಿಸುವ ಖಗವಾಹನ 5

***


No comments:

Post a Comment