Showing posts with label ಮಾಡಬಾರದು ನೋಡಿ ಕೇಡಿಗರ ಸಂಗ mahipati. Show all posts
Showing posts with label ಮಾಡಬಾರದು ನೋಡಿ ಕೇಡಿಗರ ಸಂಗ mahipati. Show all posts

Thursday, 12 December 2019

ಮಾಡಬಾರದು ನೋಡಿ ಕೇಡಿಗರ ಸಂಗ ankita mahipati

ರಾಗ ಮಾಂಡ್ ತಾಳ ಕೇರವಾ

ಮಾಡಬಾರದು ನೋಡಿ ಕೇಡಿಗರ ಸಂಗ
ಬೇಡಿ ಕಾಡದೆ ಬಾಹುದಭಿಮಾನ ಭಂಗ ||ಧ್ರುವ||

ಹೊಟ್ಟಿಯನು ಹೊಕ್ಕು ಕಟ್ಟಿಗೆ ತಂದು ನಿಲ್ಲಿಸುವರು
ಗುಟ್ಟಿಲಿಹ ತುಟ್ಟಿಗೆ ತಾಹರು
ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳತಾಹರು
ನಟ್ಟಸ್ನೇಹದ ಬಳಕಿ ತುಟ್ಟಿಸುವರು ||೧||

ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ
ಅಲ್ಲಹುದು ಮಾಡಿ ಗೆಲವಿಸಿಕೊಂಬರು
ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ
ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ ||೨||

ಏನನಾದರೆ ಕೊಟ್ಟು ಹೀನಮನುಜರ ಸಂಗ
ಮನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗ
ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ
ನೆನೆವರ ನೆರೆಲಿದ್ದು ಸುಖಿಸುವುದು ಲೇಸು ||೩||
****

ಕಾಖಂಡಕಿ ಶ್ರೀ ಮಹಿಪತಿರಾಯರು

ಮಾಡಬಾರದು ನೋಡಿ ಕೇಡಿಗರ ಸಂಗ ಭಂಗ ಪ  


ಹೊಟ್ಟೆಯನು ಹೊಕ್ಕು ಕಟ್ಟಿಗೆ ತಂದು ನಿಲಿಸ ುವರು ಗುಟ್ಟಲೀಹ ಮಾತು ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳ ತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು 1 

ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ 2 

 ಕೊಟ್ಟು ಹೀನಮನುಜರ ಸಂಗ ಮಾನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗೆ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನವರ ನೆರೆಲಿದ್ದು ಸುಖಿಸುವುದು ಲೇಸು 3

*****