Showing posts with label ವಂದಿಸುವುದನವರತ ತುಂಗಾತೀರದ ಯತಿಯ gurushyamasundara. Show all posts
Showing posts with label ವಂದಿಸುವುದನವರತ ತುಂಗಾತೀರದ ಯತಿಯ gurushyamasundara. Show all posts

Monday, 6 September 2021

ವಂದಿಸುವುದನವರತ ತುಂಗಾತೀರದ ಯತಿಯ ankita gurushyamasundara

 ರಾಗ: [ಮೋಹನ/ಭೂಪ್] ತಾಳ: [ಖಂಡಛಾಪು]


ವಂದಿಸುವುದನವರತ ತುಂಗಾತೀರದ ಯತಿಯ

ಮಂದಾರ ತರುವಂತೆ ಭಕ್ತರಿಷ್ಟವ ಕೊಡುವ


ಅಂದು ಗೋಗಳ ಕಾಯ್ವ ಬಾಲಕಗೆ ಕರುಣದಲಿ

ಬಂದ ವಿಘ್ನವ ಕಳೆದು ಅತಿ ಶೀಘ್ರದಲಿ

ಚಂದದಧಿಕಾರದಲಿ ಮೆರೆವಂತೆ ಮಾಡಿದ

ಸುಂದರ ಯತಿಗಳನು ಮನಮುಟ್ಟಿ ಭಜಿಸಿ 1

ತನಿಖೆ ಮಾಡಲು ಬಂದ ಆಂಗ್ಲಾಧಿಕಾರಿ

ಮನದಿಷ್ಟ ತಿಳಿಸುತಲಿ ಅವನ ಹರಸಿ

ಮನದ ಮಂದಿರದಲ್ಲಿ ನಿರುತ ರಾಮರ ಪೂಜೆ

ಅನವರತ ಮಾಡುತಿಹ ಮುನಿಗಳನ್ನು 2

ಶರಣರ ಸುರಧೇನು ಕರೆದಲ್ಲಿ ತಾ ಬರುವ

ಮರೆಯದಲೆ ಭಕುತರನು ಪೊರೆವ ಗುರುವು

ಗುರುಶಾಮಸುಂದರನ ಪರಮ ಪ್ರೀತಿಯ ಪಡೆದ

ನಿರುತವು ನೆನೆಯುತಿರೆ ಸಕಲ ಸಂಪದವೀವ 3

***