ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ|
ಚಿತ್ತದೊಲ್ಲಭನ ಸಂಗಡದಿ ನಲಿದು
ಮತ್ತೆ ಉಪರತಿಗೆ ಪರಪುರುಷನ ಬಯಸುವ
ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ|
ಪಗಡೆ ಚದುರಂಗ ಕವಡೆಯನಾಡ ಕರೆದರೆ
ನಿಗುರುವುವು ಕರ್ಣಗಳು ಮೊಚ್ಚೆಯಂತೆ|
ಜಗದೀಶನ ದಿನದಿ ಜಾಗರಕೆ ಕರೆದರೆ
ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ|
ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ|
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ|
ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು|
ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ|
***