..
ನಾರಾಯಣಾ ನಮೋ ನಾರಾಯಣಾ ಪ
ಘೋರ ಸಂಸಾರ ಭವದೂರ ಋಷಿಜನ ಮನೋ-ಹಾರ ಸಾಕಾರ ಸಿರಿಧರ ರೂಪನೆ ನಮೋಅ
ಉತ್ತಾನಪಾದನ ಅಣುಗಗೆ ಧ್ರುವ ಪದವಿಜತ್ತಯಿಸಿ ಕೊಟ್ಟೆ ಶ್ರೀನಾರಾಯಣಾಉತ್ಕಚದ ಬಾಲೆಯ ಕಡುಲಜ್ಜೆ ಸಭೆಯೊಳಗೆವಿಸ್ತರಿಸಿ ಕಾಯ್ದೆ ಶ್ರೀನಾರಾಯಣಾಕತ್ತರಿಸಿ ನೆಗಳು ನುಂಗಿದ ಕುಮಾರಕನ ತಂ-ದಿತ್ತೆ ಮುನಿವರನಿಗೆ ನಾರಾಯಣಾಚಿತ್ತಜಾರಿ ಕೊಲ್ಲಲಂಬರೀಷ ಭೂಪೋತ್ತಮನ ಕಾಯ್ದೆ ಶ್ರೀನಾರಾಯಣಾ 1
ನಕ್ರಂಗೆ ಸಿಲ್ಕಿ ನಡುನೀರೊಳೊದರುವ ಗಜವಚಕ್ರದಿಂ ಕಾಯ್ದೆ ಶ್ರೀನಾರಾಯಣಾಶುಕ್ರನುಪದೇಶವನು ತವೆ ಜರಿದ ವೈಷ್ಣವರಅಕ್ಕರದಿ ಪಾಲಿಸಿದೆ ನಾರಾಯಣಾಶಕ್ರಜಿತುಪಿತ ಸಹೋದರಗೆ ಸ್ಥಿರರಾಜ್ಯವನುಉತ್ಕøಷ್ಟದಿಂ ಕೊಟ್ಟೆ ನಾರಾಯಣಾದುಷ್ಕøತದಿ ಸುತನ ಪೆಸರ್ಗೊಂಡವನ ಕಾಯ್ದೆಯೊ ತ್ರಿ-ವಿಕ್ರಮಾಂಕಿತ ವೀರ ನಾರಾಯಣಾ2
ದುರಿತಾಬ್ಧಿ ಕುಂಭಸಂಭವ ದುರಿತಗಿರಿವಜ್ರದುರಿತಮದಗಜಸಿಂಹ ನಾರಾಯಣಾದುರಿತಾಹಿ ವೈನತೇಯ ದುರಿತ ಮೃಗ ವ್ಯಾಘ್ರನೆದುರಿತ ವನದಾವಶಿಖಿ ನಾರಾಯಣಾದುರಿತ ಜೀಮೂತಪವನ ದುರಿತಾಂಧಕಾರ ರವಿದುರಿತ ಲತಾಲವಿತ್ರ ನಾರಾಯಣಾದುರಿತ ಮರ್ದನ ಕಾಗಿನೆಲೆಯಾದಿಕೇಶವನೆದುರಿತ ಬಂಧವ ಪರಿದೆ ನಾರಾಯಣಾ 3
***