Showing posts with label ಎಂತು ಪೊಗಳಲಿ ನಾನು krishnavittala purandara dasa stutih. Show all posts
Showing posts with label ಎಂತು ಪೊಗಳಲಿ ನಾನು krishnavittala purandara dasa stutih. Show all posts

Monday 2 August 2021

ಎಂತು ಪೊಗಳಲಿ ನಾನು ankita krishnavittala purandara dasa stutih

ಎಂತು ಪೊಗಳಲಿ ನಾನು ಪ


ಕಂತುಪಿತನೇಕಾಂತ ಭಕ್ತನ ಪಂಥವನು ಪದ

ಪಂಕ್ತಿಯಲಿ ತುಂಬಿಟ್ಟು ಸಲಹಿದ ದಾಸವರ್ಯರ ಅ.ಪ.


ಪಾಂಡುರಂಗನ ನಿತ್ಯ ನೆನೆಯುತ್ತ

ಪಂಡಿತೋತ್ತಮರೊಡನೆ ಸುಖಿಸುತ್ತ

ಕಂಡು ಹರಿಯನು ಮುಂದೆ ಕುಣಿಯುತ್ತ

ಕುಂಡಲಿಗೆ ನಿಜ ಭೂಷಣವು ಎನಿಸುತ್ತ

ಭಂಡಜನರಾ ಪುಂಡುಮಾರ್ಗವ

ಕಂಡಕಂಡೆಡೆ ಖಂಡ್ರಿಸುತ ಬ್ರಹ್ಮಾಂಡ

ದೊಡೆಯನ ಭಕ್ತಿ ಬಿತ್ತುತ

ಹಿಂಡಿ ಮತಿಮತ ರಸವ ಕುಡಿಸಿದ ದಾಸವರ್ಯರ 1


ಮೊದಲು ಗಾಯಕ ದೇವಸಭೆಯಲ್ಲಿ

ಮುದದಿ ಕಾಮುಕ ಚೇಷ್ಟೆ ನಡೆಸುತಲಿ

ಪದವಿಯಿಂ ಚ್ಯುತನಾಗಿ ದಾಸಿಯಲಿ

ಉದಿಸಿ ಬಂದು ಸಾಧು ಸಂಗದಲಿ

ಬದಿಗೆ ತಳ್ಳುತ ಭವದ ಕೋಟಲೆ

ಮುದದಿ ಜಪಿಸುತ ವಾಸುದೇವನ

ಪದವಿ ಸಾಧಿಸಿ ದೇವ ಋಷಿ ತಾ

ಪದುಮನಾಭನ ನೆನೆದು ನರಕವ ಬ

ರಿದು ಮಾಡ್ಡ ಮಹಾನುಭಾವನ 2


ಕಾಸಿನಾಶಯವು ಮೋಸವೆಂತೆಂದು

ಹೇಸಿವಿಷಯದಿ ಲೇಸು ಸಿಗದೆಂದು

ಶ್ರೀಶ ಸಿಗುವನು ದಾಸಗೆಂತೆಂದು

ಆಶೆಯಿಂದಲಿ ಸಾರಬೇಕೆಂದು

ಓಸು ಸಂಪದ ನೂಕಿ ಭರದಿಂ

ವ್ಯಾಸರಾಯರ ಶಿಷ್ಯನೆನಿಸುತ

ವಾಸುದೇವನ ದಾಸನಾಗುತ

ದೋಷe್ಞÁನವ ನಾಶಮಾಡಿದ

ದೇಶ ತಿರುಗಿದ ದಾಸವರ್ಯರ 3


ಭಕ್ತಿಯಿಲ್ಲದ ಗಾನ ತಾನಿನ್ನು

ಕತ್ತೆಕೂಗನುಮಾನವಿಲ್ಲೆಂದು

ನಿತ್ಯದೇವನ ಗಾನ ಗೈಯಲು

ಗಾತ್ರವಿದು ನಿಜವೀಣೆಯೆಂತೆಂದು

ಸಪ್ತಸ್ವರಗಳ ಕ್ಲಪ್ತಮರ್ಮಗ

ಳೆತ್ತಿ ತೋರುತ ಶ್ರೇಷ್ಠತರ ಸಂಗೀತ

ಶಾಸ್ತ್ರವ ಬಿತ್ತಿ ಜಗದೊಳು

ಸೂತ್ರ ಸಂಮತ ನೀತಿ ನುಡಿದಿಹ ದಾಸವರ್ಯರ 4


ಮುಂದೆ ದಿವಿಜರ ಭಾಷೆ ಶಿಥಿಲತೆಯ

ಪೊಂದಿ ಪುಸ್ತಕ ದೀಚೆ ಬರದೆಂದು

ಛಂದ ಮರ್ಮವ ತಂದಿಡುವೆ ನಮ್ಮೀ

ಅಂದ ಕನ್ನಡ ದೊಳಗೆ ಎಂತೆಂದು

ಕಂದ ವೃತ್ತ ಸುಳಾದಿ ಪದಗಳ

ಛಂದ ಭೂಷಣವೃಂದ ನೀಡುತ

ನಂದದಿಂ ಕರ್ಣಾಟಮಾತೆಯ

ಮುಂದೆ ತಾ ನಲಿವಂತೆ ಮಾಡಿದ ದಾಸವರ್ಯರ 5


ನಾರಿ ಮನೆ ಪರಿವಾರ ಹರಿಗೆಂದು

ಸಾರವನ್ನೆ ಮುರಾರಿ ಮನೆಯೆಂದು

ಚಾರು ಶ್ರುತಿಗತಸಾರ ನಡತೆಯಲಿ

ಸೂರಿಯಾದವ ತೊರಬೇಕೆಂದು

ನೀರಜಾಕ್ಷನ ಧೀರ ದೂತನ

ಸಾರ ಮನವನು ಸಾರಿ ಸಾರುತ

ದೂರ ಒಡಿಸಿ ಮೂರು ಮತಗಳ

ನೇರ ಸುಖಪಥ ತೋರಿಸಿದ ಮಹರಾಯ ದಾಸರ 6


ಕರ್ಮಕೋಟಲೆಗಿಲ್ಲ ಕೊನೆಯೆಂದು

ಮರ್ಮತಿಳಿಯುತ ಬಿಂಬಹೃದಯಗನ

ನಿರ್ಮಮತೆಯಿಂದೆಸಗಿ ಕರ್ಮಗಳ

ಕರ್ಮಪತಿಗೊಪ್ಪಿಸುತ ಸರ್ವಸ್ವ

ಭರ್ಮಗರ್ಭನ ಭಕ್ತಿ ಭಾಗ್ಯದಿ

ಪೇರ್ಮೆಯಿಂ ಹರಿದಾಸನೆಸಿಸುತ

ಶರ್ಮ ಶಾಶ್ವತವಿತ್ತು ಸಲಹುವ

ವರ್ಮ ನೀಡಿದ ವಿಶ್ವಬಾಂಧವ 7


ಇಂದಿರೇಶನು ಮುಂದೆ ಕುಣಿಯುತಿರೆ

ಕುಂದುಂಟೆ ಮಹಿಮಾತಿಶಯಗಳಿಗೆ

ತಂದೆ ಕೌತಕ ವೃಂದ ಮಳೆಗರೆದು

ಕಂದನನು ಪೊರೆದಂದವೇನೆಂಬೆ

ಬಂದು ಸತಿಸಹ ಮಂದಿರಕೆ ಗೋ

ವಿಂದ ಪಾಕವಗೈದು ಬ್ರಾಹ್ಮಣ

ವೃಂದಕಿಕ್ಕುತ ದಾಸರಿಗೆ ಮುದ

ತಂದ ಮಾಧವ ಭಾಗ್ಯಕೆಣೆಯುಂಟೆ 8


ದೀನ ಹೊಲೆಯಗೆ ಪ್ರಾಣ ಬರಿಸಿದನು

ಏನು ಒಲ್ಲದೆ ಹರಿಯ ಯಜಿಸಿದನು

e್ಞÁನ ಭಾಗ್ಯದಿ ಮುಳುಗಿ ತೇಲಿದನು

ದೀನ ಜನರುದ್ಧಾರ ಮಾಡಿದನು

ದಾನಿ ಜಯಮುನಿ ವಾಯು ಹೃದಯಗ

ಚಿನ್ಮಯ ಶ್ರೀ ಕೃಷ್ಣವಿಠಲನ

ಗಾನ ಸುಧೆಯನು ಬೀರಿಸುತ ವಿ

e್ಞÁನವಿತ್ತ ಮಹೋಪಕಾರಿ ವಿಶೇಷ ಮಹಿಮನ 9

***