raghunandana teertha rayara mutt yati stutih
ರಾಗ : ಮೋಹನ ತಾಳ : ಆದಿ
ರಘುನಂದನ ಎನ್ನಘ
ಕಳೆಯೋ ಬೇಗ ।
ರಘುಪತಿಯ ಪಾದ
ಪದುಮ ಲೋಲನೆ ।। ಪಲ್ಲವಿ ।।
ಆನಂದತೀರ್ಥ
ಕುಲ ಸಂಭವನೇ ।
ಆನಂದ ಶಾಸ್ತ್ರ ತಿಳಿಸಿ
ಉದ್ಧರಿಸೋ ।। ಚರಣ ।।
ಚರಣಾರವಿಂದಕ್ಕೆರಗಿದೆ ನಾನು ।
ಮರೆಯದೆ ಯೆನ್ನ ಪೊರೆಯೊ
ಬೇಗ ನೀನು ।\ ಚರಣ ।।
ರಾಮ ಪಾದ ಧ್ಯಾನಾಸಕ್ತ
ಮುನಿ ನೀನು ।
ಕಾಮಿತಾರ್ಥವಿತ್ತು
ಪ್ರೇಮದಿಂದ ನೋಡು ।। ಚರಣ ।।
ಶರಣ ಜನರ ಕಾಯ್ವ
ಬಿರುದನ್ನು ಕೇಳಿ ।
ಮೊರೆ ಹೊಕ್ಕೆನಯ್ಯ ಕರುಣೆ
ತೋರೋ ಗುರುವೇ ।। ಚರಣ ।।
ಗುರು ಶ್ಯಾಮಸುಂದರನ
ಪಾದ ಭಜಕ ।
ನಿರುತ ಕಾಯಬೇಕೋ
ಶರಧಿಶಯನ ಪ್ರಿಯ ।। ಚರಣ ।।
****