Showing posts with label ಕರುಣಿಸೆನ್ನನು ಕರುಣಾನಿಧಿಯೆ ಹರಿ ಭಜಕರಾ gurujagannatha vittala KARUNISENNANU KARUNAANIDHIYE HARI BHAJAKARAA. Show all posts
Showing posts with label ಕರುಣಿಸೆನ್ನನು ಕರುಣಾನಿಧಿಯೆ ಹರಿ ಭಜಕರಾ gurujagannatha vittala KARUNISENNANU KARUNAANIDHIYE HARI BHAJAKARAA. Show all posts

Monday, 20 December 2021

ಕರುಣಿಸೆನ್ನನು ಕರುಣಾನಿಧಿಯೆ ಹರಿ ಭಜಕರಾ ankita gurujagannatha vittala KARUNISENNANU KARUNAANIDHIYE HARI BHAJAKARAA

ಕರುಣಿಸೆನ್ನನು ಕರುಣಾನಿಧಿಯೆ ಪ

ಹರಿ ಭಜಕರಾಗ್ರಣಿಯೆ ವರಕಪಿಶಿರೋಮಣಿಯೆ ಅ.ಪ

ತರಣಿ ತನಯನನು ನೀ ಪೊರೆÀದ ಕೀರುತಿ ಈ

ಧರಣಿತಳದಲ್ಲಿ ಪರಿಪೂರ್ಣವಾಗೀ

ಇರುವ ವಾರ್ತೆಯ ಕೇಳಿ ಹರುಷ ಮನದಲಿ ನಿನ್ನ

ಚರಣ ಪಂಕಜಯುಗ್ಮ ಭರದಿ ಭಜಿಪ ಎನ್ನ 1

ದುರುಳ ದೈತ್ಯನ ಶೀಳಿ ಧರಣಿಸುರಸುತನ ನೀ

ಪೊರೆದ ಕೀರುತಿ ಕೇಳಿ ತ್ವರದೀ

ಭರದಿ ನಿನ್ನಯ ಪಾದ ಸರಸಿಜ್ವದಯವನ್ನು

ನಿರುತ ಭಜನೆಯ ಮಾಳ್ಪ ದುರುಳ ಮಾನವ ನಾ 2

ಜನಕ ಮಾಡಿದ ಋಣವ ಹುಣಿಸೆ ಬೀಜಗಳಿಂದ

ಋಣಗಳೆದ ಘನ ಮಹಿಮೆ ಕೇಳಿ

ಮನದಿ ಯೋಚಿಸಿ ಚರಣವನಜ ಭಜಿಸುವ ಎನ್ನ

ಋಣ ಬಿಡಿಸೊ ಗುರುಜಗನ್ನಾಥ ವಿಠಲ ಪ್ರಿಯಾ 3

***