ಸೋಬಾನವೆನ್ನಿರೆ ಶ್ರೀದೇವಿ ಅರಸಗೆ ನಾಭಿಯಲೆ ಅಜನ ಪಡೆದವಗೆ ಪ.
ಬರಿಯ ಮಾಣಿಕದ ಹಸೆಗೆ ಕಿರಿಯ ಚನ್ನಿಗ ಬಾರೊಸರಿಯವರು ನೋಡಿ ನಗುವಂತೆ ಸರಿಯವರು ನೋಡಿ ನಗುವಂತೆ ಎನುತಲೆ ದೊರೆಗಳು ನುಡಿದು ಕರೆದರು1
ಮುತ್ತು ಮಾಣಿಕದ ಹಸೆಗೆ ಭಕ್ತವತ್ಸಲ ಬಾರೋಹತ್ತು ದಿಕ್ಕುಗಳ ಬೆಳಗುತ ಹತ್ತು ದಿಕ್ಕುಗಳ ಬೆಳಗುತ ಎನುತಲಿಮಿತ್ರಿ ಸುಭದ್ರಾ ಕರೆದಳು2
ಚದುರ ರಾಮೇಶನ ಮುದಿಮಾರಿವನಿತೆಯರು ಬದಿಯಲಿ ಬನ್ನಿ ಹಸೆಮ್ಯಾಲೆ ಬದಿಯಲಿ ಬನ್ನಿ ಹಸೆಮ್ಯಾಲೆ ಎನುತಲಿ ಸುದತೆÉ ಸುಭದ್ರಾ ಕರೆದಳು3
***