ರಾಗ : ಮಿಶ್ರ ಬೆಹಾಗ್ ಆದಿತಾಳ
audio by sumukh moudgalya
ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ಕರೆವರು ಬಾ ಮನೆಗೆ ಶ್ರೀಕೃಷ್ಣ
ಮೂಜಗಗಳಿಗೆ ರಾಜಾಧಿರಾಜ ॥ಪ॥
ರಾಜಿಸುವ ಸೋಜಿಗದ ಬಲು
ಸೋಜಿಗದ ಮನೆಗೆ ಶ್ರೀಕೃಷ್ಣ ॥ಅ.ಪ॥
ಸಾರಸಲೋಚನೆ ಭೀಷ್ಕಕ ಕುವರಿ
ನೂರು ವಿಧದ ಬಲು ಪರಿಮಳದ
ಚಾರು ಕುಸುಮಗಳ ಹಾರವ ಪಿಡಿದು
ಮಾರಜನಕ ನಿನ್ನ ಕೋರುವಳು ॥೧॥
ಚಿತ್ತಜನಯ್ಯನ ಚಿತ್ತದ ರಾಣಿ
ಯತ್ನದಿ ನಿನ್ನನು ಕರೆಸಿದಳು
ಚಿತ್ರವಿಚಿತ್ರದ ಮುತ್ತು ರತ್ನಗಳ
ಉತ್ತಮ ಪೀಠಕೆ ದಯಮಾಡೋ॥೨॥
ಯದುಕುಲ ನಂದನ ನೀ ಬಾರೋ
ಮಧುರಾ ನಾಥ ನೀ ಬಾರೋ
ಮದಗಜಗಮನದಿ ಬಾರೋ ಪ್ರಸನ್ನ
ವದನೆಯರಾರುತಿ ಬೆಳಗುವರು ॥೩॥
***