..
ಘಿಲಿ ಘಿಲಿ ಘಿಲಿಕೆಂದು ಗೆಜ್ಜೆಘಿಲಿ ಘಿಲಿ ಘಿಲಿಕೆಂದು ಗೆಜ್ಜೆ ಪ.
ಘಿಲಿ ಘಿಲಿ ಘಿಲಿ ಘಿಲಿಕು ಎನ್ನುತಲೆ ಬಲು ಬಲು ರೌಸದಿ ಬಾಲೆ ರಂಭಾ 1
ಕಿಲಿ ಕಿಲಿ ಕಿಲಿ ಕಿಲಿ ಕಿಂಕಿಣಿ ಜಾಲದಿನಲಿನಲಿದಾಡುತ ಚಲ್ವೆ ರಂಭಾ2
ಝಣ ಝಣರೆನುತಲಿ ಜಾಣಿ ಕುಣಿ ಕುಣಿದಾಡುತ ಕುಂಭಿಣಿ ಮ್ಯಾಲೆರಂಭಾ 3
ಥಳ ಥಳ ಹೊಳೆಯುತ ತಾಳವ ಹಾಕುತ ಅಳಕಿಸಿ ಸೂರ್ಯನ ಬೆಳಕವ ತಾನು 4
ತಕ್ಕಡ ತಕ್ಕಡ ತಾಥಾ ಎನುತಲೆ ಧಿಕ್ಕಿಡಿ ಧಿಕ್ಕಿಡಿ ಧಿಮಕಿಡಿ ಕೃಷ್ಣ 5
ಘಲು ಘಲು ಘಲುಕು ಎನುತ ಚಲ್ವ ರಾಮೇಶನ ಸುಲಭದಿ ಒಲಿಸಿ 6
****