Showing posts with label ಕೈಯ ಬಿಡದಿರೊ vijaya vittala ankita suladi ಪ್ರಾರ್ಥನಾ ಭಾಗ ಸುಳಾದಿ KAIYA BIDADIRO PRAARTHANA BHAGA SULADI. Show all posts
Showing posts with label ಕೈಯ ಬಿಡದಿರೊ vijaya vittala ankita suladi ಪ್ರಾರ್ಥನಾ ಭಾಗ ಸುಳಾದಿ KAIYA BIDADIRO PRAARTHANA BHAGA SULADI. Show all posts

Sunday 8 December 2019

ಕೈಯ ಬಿಡದಿರೊ vijaya vittala ankita suladi ಪ್ರಾರ್ಥನಾ ಭಾಗ ಸುಳಾದಿ KAIYA BIDADIRO PRAARTHANA BHAGA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಪ್ರಾರ್ಥನಾ ಭಾಗ ಸುಳಾದಿ 

 ರಾಗ ತೋಡಿ 

 ಧ್ರುವತಾಳ 

ಕೈಯ ಬಿಡದಿರೊ ಹರಿ ಕೈಟಭಾಸುರ ವೈರಿ
ಅಯ್ಯಾ ನಿನ್ನ ನಂಬಿದೆನೊ ಎನಗೆ ಮುಂದೆನೊ
ಪಯಿಕರವನು ತೋರೊ ಪತಿತರ ಸುರತರು
ಜಯಿಸಲಾರೆನು ಜನನವೆಂಬೋದು ಕಾನನ
ಲಯ ಮಾಡೊ ವಿಜಯವಿಠ್ಠಲರೇಯ ದಯದಿಂದ
ಮಯದುನಗೆ ಒಲಿದಂತೆ ಒಲಿದು ವೇಗದಲ್ಲಿ ॥ 1 ॥

 ಮಟ್ಟತಾಳ 

ಆರನ ಮೊರೆಯೊಗಲಿ ಆರಂಘ್ರಿಗೆರಗಲಿ
ಆರನ ಕಾಡಲಿ ಆರನಲ್ಲೊ
ಆರಲ್ಲಿಗೆ ಪೋಗೆ ಆರೆವೆಂದರೊ
ಆರೆನಗಿಲ್ಲ ವಿಜಯವಿಠ್ಠಲ ನೀನೆ ಗತಿಯೊ
ಆರೈದು ಸಲಹಯ್ಯಾ ಆರೊಂದು ಪುರದೊಳು ॥ 2 ॥

 ತ್ರಿವಿಡಿತಾಳ 

ಚತುರದಶ ಭುವನಗಳಲ್ಲಿ ಚತುರಾತ್ಮಕ ನೀನೆಂದು
ಚತುರವಾರ್ತಿಯ ಕೇಳಿ ಚತುರದಲ್ಲಿ ನೆರದೆ
ಚತುರ ಸಿರಿ  ವಿಜಯವಿಠ್ಠಲ ರಂಗರಾಯಾ
ಚತುರ ಮೂರುತಿಯೆ ಚತುರನ್ನ ಮಾಡೋ ॥ 3 ॥

 ಅಟ್ಟತಾಳ 

ಕಾಸನಿತ್ತು ನೃಪನ ರಾಣಿವಾಸದವರ ಕೈಯ
ಮೀಸಲನ್ನ ಬಯಸಿದಂತೆ ಬಯಸಿದೇನಯ್ಯಾ ನಾನು
ದೋಷಕಾರಿಗದು ಆಯಾಸವಲ್ಲವೆ ದೇವ
ಲೇಸನೀವಲ್ಲಿ ನಿನಗೆಲ್ಲಿ ಸರಿಯಿಲ್ಲವೆಂದು
ದೇಶದೊಳಗೆ ಪೊಗಳುತಿದೆ 
ಈಸು ಮೂರುತಿಯನು ಬಿಟ್ಟು ಆಶೆಯಲ್ಲಿ ನಾನು ಬಂದೆ
ಶ್ರೀಶ ವಿಜಯವಿಠ್ಠಲ ನಿಜ ದಾಸ -
ದಾಸರ ಕೂಡ ಎಣಿಸುವದು ಬಿಡದೆ ಎನ್ನನು ॥ 4 ॥

 ಆದಿತಾಳ 

ನಾನು ನಿನ್ನನು ಮೆಚ್ಚಿಸುವೆನೆ ಏನಾದರಿನ್ನಾಗದಯ್ಯ 
ನೀನೆ ದಯದಿಂದ ಸತ್ರಾಣನ್ನ ಮಾಡು ಮಾಡು 
ಮಾನಸ ಧ್ಯಾನದಲ್ಲಿ ಜ್ಞಾನದೃಷ್ಟಿಯೊಳಗೆ ಪೊಳೆದು
ಆನಂದವಾರಿಧಿಯೊಳು ದೀನ ಮಾನವನ ಇಡು
ಶ್ರೀನಿವಾಸ ವಿಜಯವಿಠ್ಠಲ ನೀನೆ ಕರುಣಾಳು ಅಲ್ಲವೆ
ಭಾನುವಿಗೆ ಬಿಸಿಲಿನಿಂದ ಏನುಪಕಾರ ಪೇಳು ॥ 5 ॥

 ಜತೆ 

ಎಂದೆಂದಿಗೆ ನಿನ್ನ ಪೊಂದಿದವನೊ ಪು -
ರಂದರಗೊಲಿದಂತೆ ಒಲಿಯೊ ವಿಜಯವಿಠ್ಠಲ ॥
**********