..
kruti by bhupati vittalaru ( kakhandaki Ramacharyaru)
ರಾಗ – : ತಾಳ –
ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣ
ತೊಳೆದು ತೀರ್ಥ ಪಾನ ಮಾಡುವೆ ನಾ ll ಪ ll
ನೀರುಬಿಟ್ಟು ಮೇಲೆ ಬಾರೋ ಬೆನ್ನ
ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆ
ಕೋರೆದಾಡಿಯ ತೋರ ಬಾರೋ ನಿನ್ನ
ಧೀರ ಗಂಭೀರ ನರಹರಿ ರೂಪ ತೋರೊ ll ೧ ll
ಪುಟ್ಟ ಬ್ರಾಹ್ಮಣನಾಗಿ ಬಾರೊ ಆ
ದುಷ್ಟ ಕ್ಷತ್ರಿಯರನ್ನು ತರಿದವನೆ ಬಾರೋ
ಸತ್ಯಸಂಧ ರಾಮ ಬಾರೋ ಬಲು
ಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ ll ೨ ll
ಬುದ್ಧ ಪ್ರಬುದ್ಧನಾಗಿ ಬಾರೊ ಬಲು
ದೊಡ್ಡ ತೇಜಿಯನೇರಿ ಭರದಿಂದ ಬಾರೋ
ಮುದ್ದು ಭೂಪತಿವಿಟ್ಠಲ ಬಾರೋ ನಮ್ಮ
ಮುದ್ದುರಾಯರಿಗೊಲಿದ ಕೃಷ್ಣಯ್ಯ ಬಾರೋ ll ೩ ll
***
ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪ
ನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ1
ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ 2
ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ ವಿಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ 3
***