Showing posts with label ಹನುಮಂತ ದೇವ ನಮೋ ವನಧಿಯನು purandara vittala HANUMANTA DEVA NAMO VANADHIYANU. Show all posts
Showing posts with label ಹನುಮಂತ ದೇವ ನಮೋ ವನಧಿಯನು purandara vittala HANUMANTA DEVA NAMO VANADHIYANU. Show all posts

Tuesday, 14 December 2021

ಹನುಮಂತ ದೇವ ನಮೋ ವನಧಿಯನು purandara vittala HANUMANTA DEVA NAMO VANADHIYANU





ಹನುಮಂತ ದೇವ ನಮೋ ||ಪ||

ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ||

ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆ
ಕಂಜಸಖ ಮಂಡಲಕೆ ಕೈದುಡುಕಿದೆ
ಭುಂಜಿಸಿ ಇರಲು ಜನಂಗಳನು ನಡುಗಿಸಿದೆ
ಭಂಜರತ್ಮಕೆ ನಿನಗೆ ಸರಿ ಯಾರು ಗುರುವೆ ||

ಹೇಮಕುಂಡಲ ಹೇಮಯಜ್ಞೋಪವೀತಧರ
ಹೇಮಕಟಿಸೂತ್ರ ಕೌಪೀನವನು ಧರಿಸಿ
ರೋಮರೋಮಕೆ ಕೋಟಿ ಲಿಂಗ ಸರ್ವಾಂಗ
ರಾಮಭೃತ್ಯನೆ ನಿನಗೆ ಸರಿ ಯಾರು ಗುರುವೆ ||

ಅಕ್ಷಕುಮಾರಕನ ನಿಕ್ಷರಸಿ ಬಿಟ್ಟೆ ನೀ
ರಾಕ್ಷಸರೊಳಧಿಕ ರಾವಣನ ರಣದಲ್ಲಿ
ವಕ್ಷಸ್ಥಳ ಒದೆದು ಮೂರ್ಛಿಸಿ ಬಿಸಾಟೆ ತ್ರಿಜಗ-
ರಕ್ಷಕನ ಶಿಕ್ಷಕ ಶ್ರೀ ರಾಮದಳರಕ್ಷ ||

ರಾಮ ಲಕ್ಷ್ಮಣರ ಕಟ್ಟಾಳಾಗಿ ನೀ ನಡೆದೆ
ಭೂಮಿಜೆಗೆ ಮುದ್ರೆಯುಂಗುರವನಿತ್ತೆ
ಆ ಮಹಾ ಲಂಕೆನಗರವೆಲ್ಲವನು ನೀ
ಧೂಮಧಾಮವ ಮಾಡಿ ಮೆರೆದೆ ಮಹಾತ್ಮ ||

ಶ್ರೀಮದಾಚಾರ್ಯರ ಪುರಪತಿಯೆಂದೆನಿಪ
ಶ್ರೀ ಮಹಾಲಕುಮಿ ನಾರಾಯಣ ರೂಪ
ಶ್ರೀ ಮನೋಹರ ಪುರಂದರ ವಿಠಲನವಸರಾ-
ಪ್ರೇಮದಾಳು ಹನುಮಂತ ಬಲವಂತ ||
****

ರಾಗ: ಭೂಪಾಳಿ. ಏಕ ತಾಳ (raga, taala may differ in audio)


pallavi

hanumanta dEva namO

anupallavi

vanadhiyanu dATi dAnavara daNDisida

caraNam 1

anjaneya garbha puNyOdayanendenipe kanja sakha maNDalake kai tuDukide
bhunji sIrELu jagangaLanu uLuhide bhanjanAtmaja guruve sari kANe ninage

caraNam 2

hEmakuNDala hEma yajnOpavItakhiLa hEma kaTi sUtra kaupInadaHri
rOma kOTi linga sarva shyAmala varNa rAma bhrtyane ninage sari kANe guruve

caraNam 3

akSaya kumArakana niTTorasi pisuTu nI rAkSasAdhipa rAvaNanu raNadali
vakSa sthaLadalli shikSisalu mUrceya bakeya rakSisite rakSisite rAya balavanta

caraNam 4

rAma lakSmaNara kaNDALAgi nI merade bhUmijege mudreyunguravanitte
A mahA lankA nagara vellavanu suTTu dhUmadhAmava mADi aLideyA mahAtma

caraNam 5

shrImadAcAryara purapatiyendenipa shrI mahAlakumi nArAyaNa rUpa
shrI manOhara purandara viTTala rAyana saumya manadALu hanumanta balavanta
***

ಹನುಮಂತ ದೇವ ನಮೋ ಪ

ವನಧಿಯನು ದಾಟಿ ರಾವಣನ ದಂಡಿಸಿದೆ ಅ.ಪ

ಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋಕಂಜಸಖಮಂಡಲಕೆ ಕೈ ದುಡುಕಿದೆ ||ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ-ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ 1

ಹೇಮಕುಂಡಲಹೇಮಯಜೊÕೀಪವೀತಖಿಳಹೇಮಕಟಿಸೂತ್ರಕೌಪೀನಧಾರೀ ||ರೋಮ ಕೋಟಿ ಲಿಂಗ ಸರ್ವಶ್ಯಾಮಲ ವರ್ಣರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ 2

ರಾಮ-ಲಕ್ಷನರ ಕಂಡಾಳಾಗಿ ನೀ ಮೆರೆದೆ |ಭೂಮಿಜೆಗೆ ಮುದ್ರೆಯುಂಗುರವನಿತ್ತೆ ||ಆ ಮಹಾ ಲಂಕಾ ನಗರವೆಲ್ಲವನು ಸುಟ್ಟುಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ 3

ಆಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀರಾಕ್ಷಸಾಧಿಪ ರಾವಣನು ರಣದಲಿ ||ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛೆಯ ಬಗೆಯರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ 4

ಶ್ರೀಮದಾಚಾರ್ಯ ಕುಲದವನೆಂದೆನಿಸಿದೆಯೈಶ್ರೀ ಮಹಾಲಕುಮಿ ನಾರಾಯಣಾಖ್ಯ ||ಶ್ರೀ ಮನೋಹರಪುರಂದರವಿಠಲ ರಾಯನಸೌಮ್ಯಮನದಾಳು ಹನುಮಂತ ಬಲವಂತ 5
*********