Showing posts with label ನೋಡು ಮನವೆ ನಿನ್ನೊಳಾಡುವ ಹಂಸನ mahipati. Show all posts
Showing posts with label ನೋಡು ಮನವೆ ನಿನ್ನೊಳಾಡುವ ಹಂಸನ mahipati. Show all posts

Wednesday, 11 December 2019

ನೋಡು ಮನವೆ ನಿನ್ನೊಳಾಡುವ ಹಂಸನ ankita mahipati

ಬಸಂತ್ ರಾಗ ಝಪ್ ತಾಳ

ನೋಡು ಮನವೆ ನಿನ್ನೊಳಾಡುವ ಹಂಸನ
ಇಡಾಪಿಂಗಳ ಮಧ್ಯನಾಡಿವಿಡಿದು ||ಪ||

ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ
ಹಾದಿವಿಡಿದು ನೋಡು ಮಣಿಪುರದ
ಒದಗಿ ಕುಡುವ ಅನಹತ ಹೃದಯಸ್ಥಾನವ
ಸಾಧಿಸಿ ನೋಡುವದು ವಿಶುದ್ಧವ ||೧||

ಭೇದಿಸಿ ನೋಡುವದಾಜ್ಞಾ ಚಕ್ರ ದ್ವಿದಳ
ಸಾಧಿಸುವದು ಸುಖ ಸಾಧುಜನ
ಆಧಾರದಲಿಹ ತಾ ಅಧಿಷ್ಠಾನವ ನೋಡು
ಅಧಿಪತಿ ಆಗಿಹಾಧೀನ ದೈವವ ||೨||

ಮ್ಯಾಲಿಹ ಬ್ರಹ್ಮಾಂಡ ಸಹಸ್ರದಳ ಕಮಲ
ಹೊಳೆಯುತಿಹ ಭಾಸ್ಕರ ಪ್ರಭೆಯು ಕೂಡಿ
ಮೂಲಸ್ಥಾನದ ನಿಜನೆಲೆನಿಭವ ನೋಡು
ಬಲಕನೊಡೇಯ ಮಹಿಪತಿಸ್ವಾಮಿಯ ||೩||
****

ನೋಡು ಮನವೆ ನಿನ್ನೊಳಾಡುವ ಹಂಸ ಇಡಾಪಿಂಗಳ ಮಧ್ಯನಾಡಿವಿಡಿದು ಪ  


ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ ಹಾದಿವಿಡಿದು ನೋಡು ಮಣಿಪುರದ ಒದಗಿ ಕುಡುವ ಅನಾಹತ ಹೃದಯಸ್ಥಾನವ ಸಾಧಿಸಿ ನೋಡುವದು ವಿಶುದ್ಧವ 1 

ಭೇದಿಸಿ ನೋಡುವದಾಜ್ಞಾಚಕ್ರ ದ್ವಿದಳ ಸಾಧಿಸುವದು ಸುಖ ಸಾಧುಜನ ಅಧರದಲಿಹ್ಯ ತಾ ಆಧಿಷ್ಠಾನವ ನೋಡು ಆಧಿಪತಿ ಆಗಿಹಾಧೀನ ದೈವವ 2

ಮ್ಯಾಲಿಹ್ಯ ಬ್ರಹ್ಮಾಂಡ ಸಹಸ್ರದಳ ಕಮಲ ಹೊಳೆಯುತಿಹ ಭಾಸ್ಕರ ಪ್ರಭೆಯ ಕೂಡಿ ಮೂಲಸ್ಥಾನದ ನಿಜ ನೆಲೆ ನಿಭವ ನೋಡುವ ಬಾಲಕನೊಡೆಯ ಮಹಿಪತಿ ಸ್ವಾಮಿಯ 3

***