Showing posts with label ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ ತಡೆಯದೆ ವೈಕುಂಠವಹುದು ಸೋಜಿಗವೆ shree krishna. Show all posts
Showing posts with label ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ ತಡೆಯದೆ ವೈಕುಂಠವಹುದು ಸೋಜಿಗವೆ shree krishna. Show all posts

Wednesday, 1 September 2021

ಬಿಡದೆ ನಿಮ್ಮನು ಪೂಜಿಸುವ ದಾಸರಿಗೆ ತಡೆಯದೆ ವೈಕುಂಠವಹುದು ಸೋಜಿಗವೆ ankita shree krishna

 ..

ಬಿಡದೆ ನಿಮ್ಮನು ಪೂಜಿಸುವ ದಾಸರಿಗೆಪ


ತಡೆಯದೆ ವೈಕುಂಠವಹುದು ಸೋಜಿಗವೆ ಅ.ಪ.


ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ 1


ಷಡುರಸಾಯನದೂಟ ರಚಿಸಿರಲು ಕುರುಪತಿಯುಬಡವಿದುರನ ಮನೆಯ ಕುಡುತೆ ಪಾಲ್ಕುಡಿದು ಪೊಡವಿಯನು ಮೆಟ್ಟಿ ಪಾಪಿಷ್ಠನನು ಕೆಡಹಿದೆಬಡವರಾಧಾರಿಯೆಂಬ ಬಿರುದನು ಪಡೆದೆ 2


ಕಡಲಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿಒಡನೆ ಅವಳನು ಸುರೂಪಿಯ ಮಾಡಿದೆಸಡಗರದಿ ಅನವರತ ಬಿಡದೆ ಪೂಜಿಸುವಂಥದೃಢಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ 3

***